Connect with us

    LATEST NEWS

    ಆಂಬ್ಯುಲೆನ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ, 4 ಕೆಜಿ ಗಾಂಜಾ ವಶ..!

    ಕೊಲ್ಲಂ : ಮಾದಕ ಪದಾರ್ಥಗಳ ಸಾಗಾಟಕ್ಕೆ ಆ್ಯಂಬುಲೆನ್ಸ್‌ಗಳ ಬಳಕೆಯಾಗುತ್ತಿರುವ ಅಘಾತಕಾರಿ ಸುದ್ದಿ ಕೇರಳದಲ್ಲಿ ಬಯಲಾಗಿದೆ.  ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ 4 ಕೆಜಿ ಗಾಂಜಾ ಸಹಿತ ಇಬ್ಬರನ್ನು ಕೊಲ್ಲಂನ ಪತ್ತನಪುರಂ ಪಿಟವೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಕಾರವೂರು ಮೂಲದ ವಿಷ್ಣು ಹಾಗೂ ಪುನಲೂರಿನ ನಾಸೀರ್ ಬಂಧಿತ ಆರೋಪಿಗಳಾಗಿದ್ದಾರೆ. ಪುನಲೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಇವರು ಸಿಕ್ಕಿಬಿದ್ದಿದ್ದಾರೆ. ಪುನಲೂರು ತಾಲೂಕು ಆಸ್ಪತ್ರೆ ಬಳಿ ಆಂಬ್ಯುಲೆನ್ಸ್ ಓಡುತ್ತಿತ್ತು ಸಮಶಯವಾಗಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿದೆ.  ಪಠಾಣಪುರಂ ಪ್ರದೇಶಕ್ಕೆ ಗಾಂಜಾ ವ್ಯಾಪಕವಾಗಿ ಸಾಗಾಟವಾಗುತ್ತಿದೆ ಎಂದು ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಈ ಅಕ್ರಮ ಜಾಲ ಬಯಲಾಗಿದೆ. ತಲಾ 2 ಕೆಜಿಯ ಎರಡು ಪೊಟ್ಟಣಗಳಲ್ಲಿ 4 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply