Connect with us

    LATEST NEWS

    ಟೆಸ್ಟ್ ಡ್ರೈವ್ ಗೆ ಹೋಗಿದ್ದ ಕೋಟಿ ಬೆಲೆಬಾಳುವ ಕಾರುಗಳ ನಡುವೆ ಮುಖಮುಖಿ ಡಿಕ್ಕಿ

    ಕೊಚ್ಚಿ ಸೆಪ್ಟೆಂಬರ್ 02: ಟೆಸ್ಟ್ ಡ್ರೈವ್ ಗೆ ತೆಗೆದುಕೊಂಡು ಹೋದ ಕೋಟಿ ಬೆಲೆಬಾಳುವ ಎರಡು ಕಾರುಗಳ ನಡುವಿನ ಭೀಕರ ಅಪಘಾತ ನಡೆದ ಘಟನೆ ಕೊಚ್ಚಿ ನಡೆದಿದೆ.
    ಮರ್ಸಿಡಿಸ್ ಬೆಂಝ್ ತಯಾರಿಸಿದ ಎರಡು ಐಷಾರಾಮಿ ಕಾರುಗಳು ಕೊಚ್ಚಿಯಲ್ಲಿ ಶನಿವಾರ ಟೆಸ್ಟ್ ಡ್ರೈವ್ ವೇಳೆ ಅಪಘಾತಕ್ಕೀಡಾಗಿದೆ. ವಿಲಿಂಗ್ಡನ್ ಐಲ್ಯಾಂಡ್ ರಸ್ತೆಯ ಕೇಂದ್ರೀಯ ವಿದ್ಯಾಲಯ ಮೈದಾನದ ಮುಂಭಾಗದ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದೆ.


    ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಜಿಟಿ 63 ಎಸ್‌ಇ, ಸಮೀಪದ ರೈಲ್ವೆ ಗೇಟ್‌ನ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದಾಗ ರಸ್ತೆ ಬದಿಯ ಹಳೆಯ ರೈಲ್ವೆ ಹಳಿಯ ಎತ್ತರದ ವಿಭಾಗಕ್ಕೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ಕಳೆದುಕೊಂಡಿತು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಎದುರು ದಿಕ್ಕಿನಿಂದ ಬರುತ್ತಿದ್ದ ಎಸ್‌ಎಲ್ 55 ರೋಡ್‌ಸ್ಟರ್‌ಗೆ ಡಿಕ್ಕಿ ಹೊಡೆದಿದೆ.
    ಘರ್ಷಣೆಯಲ್ಲಿ GT 63 SE ನ ಮುಂಭಾಗದ ಭಾಗವು ಸಂಪೂರ್ಣವಾಗಿ ಹಾನಿಯಾದರೆ ಮತ್ತೊಂದು SL55 ರೋಡ್‌ಸ್ಟರ್‌ನ ಮುಂಭಾಗದ ಚಕ್ರ ಹಾನಿಯಾಗಿದೆ. ಒಂದು ಕಾರು ಓಡಿಸುತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.


    ಅಪಘಾತಕ್ಕೀಡಾದ ಎರಡು ವಾಹನಗಳೂ ಕೋಟಿ ಬೆಲೆಬಾಳುತ್ತವೆ. Mercedes-Benz SL55 ರೋಡ್‌ಸ್ಟರ್ ಗೆ ಭಾರತದಲ್ಲಿ 2.44ಕೋಟಿ ಬೆಲೆಬಾಳುತ್ತದೆ. ಮತ್ತೊಂದು ವಾಹನ GT 63 SE ಭಾರತದ್ಲಿ 3.30 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *