ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿ

ಸುಳ್ಯ ಮೇ 16: ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿಯಾದ ಘಟನೆ ಸುಳ್ಯ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ.
ಕನಕಮಜಲಿನ ಭಜನಮಂದಿರದ ಬಳಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನಪ್ಪಿದ್ದಾರೆ. ಮೃತರನ್ನು ಗಣೇಶ್ (23), ಆಲ್ವಿನ್ ಜಾಕ್ಸನ್ (28) ಎಂದು ಗುರುತಿಸಲಾಗಿದೆ.

ಕೆಲಸವನ್ನು ಗುತ್ತಿಗೆಗೆ ಪಡೆದಿದ್ದ ಗುತ್ತಿಗೆದಾರ ಮೆಸ್ಕಾಂಗೆ ಮಾಹಿತಿ‌ ನೀಡದೆ ಕೆಲಸ ಮಾಡಿಸಿದ್ದರಿಂದ ಈ ಘಟನೆ ನಡೆದಿದೆ. ಗುತ್ತಿಗೆದಾರ ಲೋಕೇಶ್ ನಾಯಕ್ ವಿರುದ್ದ ‌ದೂರು ನೀಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments