Connect with us

    DAKSHINA KANNADA

    ಕಡಬ ಹಳೆ ಪೋಲೀಸ್ ಠಾಣೆಯಲ್ಲಿ ಭಾರೀ ಸ್ಪೋಟ

    ಕಡಬ ಹಳೆ ಪೋಲೀಸ್ ಠಾಣೆಯಲ್ಲಿ ಭಾರೀ ಸ್ಪೋಟ

    ಪುತ್ತೂರು, ಮೇ 16: ಕಡಬದ ಹಳೆ ಪೋಲೀಸ್ ಠಾಣೆಯ ಕಟ್ಟಡದಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಸ್ಪೋಟದ ರಭಸಕ್ಕೆ ಪೋಲೀಸ್ ಠಾಣೆಯ ಕಟ್ಟಡ ಭಾಗಶ ಸ್ಪೋಟಗೊಂಡಿದೆ.

    ಕಟ್ಟಡದ ಹೆಂಚುಗಳು ಆಕಾಶದೆತ್ತರಕ್ಕೆ ಹಾರಿದ್ದು, ಗೋಡೆಗಳಲ್ಲಿ ಭಾರೀ ಬಿರುಕು ಕಂಡು ಬಂದಿದೆ.

    ಇಂದು ಸುಮಾರು ರಾತ್ರಿ 7 ಗಂಟೆಗೆ ಈ ಸ್ಟೋಟದ ಶಬ್ದ ಕಡಬ ಪೇಟೆಯಲ್ಲಿರುವ ಸಾರ್ವಜನಿಕರನ್ನು ಬೆಜ್ಜಿ ಬೀಳಿಸಿತ್ತು.

    ಸ್ಪೋಟಕ್ಕೆ ಸ್ಪಷ್ಟ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.

    ಈ ಕಟ್ಟಡದಲ್ಲಿ ಕಡಬ ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಹೋಂಗಾರ್ಡ್ ಗಳು ತಂಗುತ್ತಿದ್ದು, ಸ್ಪೋಟ ಸಂಭವಿಸುವ ವೇಳೆ ಇಲ್ಲಿ ಯಾರೂ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ಕಡಬ ಪೋಲೀಸ್ ಠಾಣೆಯ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಪೋಲೀಸರು ಸ್ಪೋಟಕ್ಕೆ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply