LATEST NEWS
ರಾಮೇಶ್ವರಂ ನ ಅಗ್ನಿತೀರ್ಥ ಬಳಿ ಮಹಿಳೆಯರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಹಿಡನ್ ಕ್ಯಾಮರಾ – ಇಬ್ಬರು ಅರೆಸ್ಟ್
ಚೆನ್ನೈ ಡಿಸೆಂಬರ್ 24: ತಮಿಳುನಾಡಿನ ಖ್ಯಾತ ಧಾರ್ಮಿಕ ಕ್ಷೇತ್ರ ರಾಮೇಶ್ವರಂನ ಅಗ್ನಿ ತೀರ್ಥಂ ಬಳಿ ಇರುವ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಮಹಿಳೆಯರನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಮೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪುದುಕ್ಕೊಟ್ಟೈ ಜಿಲ್ಲೆಯ ತಿರುಮಯಂನ ಕುಟುಂಬದ ಯುವತಿಯೊಬ್ಬರು ಬಟ್ಟೆ ಬದಲಾಯಿಸುವಾಗ ಕ್ಯಾಮೆರಾವನ್ನು ಪತ್ತೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಡೈಲಿ ಥಂಥಿ ವರದಿಯ ಪ್ರಕಾರ, 10 ಸದಸ್ಯರ ಕುಟುಂಬವು ಧಾರ್ಮಿಕ ಸ್ನಾನಕ್ಕಾಗಿ ಅಗ್ನಿ ತೀರ್ಥಕ್ಕೆ ಭೇಟಿ ನೀಡಿತು ಮತ್ತು ನಂತರ ಹತ್ತಿರದ ಚಹಾ ಅಂಗಡಿಯ ಸಮೀಪದ ಇರುವ ಕೊಠಡಿಯಲ್ಲಿ ಬಟ್ಟೆ ಬದಲಾಯಿಸಲು ಮುಂದಾಯಿತು. ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಹಿಡನ್ ಕ್ಯಾಮೆರಾವನ್ನು ಗಮನಿಸಿದ ಮಹಿಳೆ ತಕ್ಷಣ ತನ್ನ ತಂದೆಗೆ ಮಾಹಿತಿ ನೀಡಿದ್ದು, ಅವರು ರಾಮೇಶ್ವರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳಾದ ರಾಮೇಶ್ವರಂ ಥಂಪಿಯಾನ್ ಕೊಟ್ಟೈ ನಿವಾಸಿ ರಾಜೇಶ್ ಕಣ್ಣನ್ (34) ಮತ್ತು ರೈಲ್ವೇ ಪುದೂರು ರಸ್ತೆಯ ರೈಲ್ವೆ ಕಾರ್ಮಿಕ ಮೀರಾನ್ ಮೈದೀನ್ (38) ಅವರನ್ನು ಬಂಧಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಹಲವು ತಿಂಗಳುಗಳಿಂದ ಮಹಿಳೆಯರು ಬಟ್ಟೆ ಬದಲಾಯಿಸುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಶಂಕಿತರು ಯಾವುದೇ ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆಯೇ ಅಥವಾ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆಯೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.