LATEST NEWS
ಸಿದ್ದು ಮೂಸೆವಾಲ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಜೈಲಿನಲ್ಲಿಯೇ ಹತ್ಯೆ
ಅಮೃತಸರ, ಫೆಬ್ರವರಿ 27: ಖ್ಯಾತ ಗಾಯಕ ಸಿದ್ದು ಮೂಸೆವಾಲ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ವಿರೋಧಿ ಬಣ ಜೈಲಿನಲ್ಲಿಯೇ ಹತ್ಯೆ ಮಾಡಿದೆ. ಪಂಜಾಬಿನ ತರನ್ ತರನ್ ಜಿಲ್ಲೆಯ ಗೊಯಿನ್ಡ್ವಾಲ್ ಸಾಹೀಬ್ ಸೆಂಟ್ರಲ್ ಜೈಲಿನಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ.
ಬಟಾಲಾದ ಮಂದೀಪ್ ಸಿಂಗ್ ಆಲಿಯಾಸ್ ತೂಫಾನ್ ಹಾಗೂ ಬಟಿಂಡಾದ ಬುಧಾಲ್ದ ವಾಸಿ ಮನಮೋಹನ್ ಸಿಂಗ್ ಆಲಿಯಾಸ್ ಮೋನಾ ಮೃತಪಟ್ಟವರಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಕೇಶವ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರುಗಳ ಮೇಲೆ ವಿರೋಧಿ ಬಣ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಚೂಪಾದ ವಸ್ತುಗಳಿಂದ ದಾಳಿ ನಡೆಸಿದ್ದು, ಇದರ ಪರಿಣಾಮ ಸಾವಿಗೀಡಾಗಿದ್ದಾರೆ. ಗಾಯಕ ಸಿದ್ದು ಮೂಸೆವಾಲ ಅವರನ್ನು ಕಳೆದ ವರ್ಷದ ಮೇ 29 ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹಾಗೂ ಜಗ್ಗು ಭಗವಾನ್ ಪುರಿಯಾ ಗ್ಯಾಂಗ್ ಒಟ್ಟಾಗಿ ಈ ಕೃತ್ಯ ನಡೆಸಿತ್ತು.
ಆದರೆ ಈ ಗ್ಯಾಂಗುಗಳ ನಡುವೆಯೇ ವೈರತ್ವ ಇದ್ದ ಕಾರಣ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿತ್ತು. ಆದರೆ ಭಾನುವಾರದಂದು ಮುಖಾಮುಖಿಯಾದ ಈ ಎರಡೂ ತಂಡ ಪರಸ್ಪರ ಹೊಡೆದಾಡಿಕೊಂಡಿದೆ.