Connect with us

    LATEST NEWS

    ಫೇಕ್ ರಮ್ಯಾ ವಿರುದ್ದ ಮುಂದುವರೆದ ಜಗ್ಗೇಶ್ ಟ್ವೀಟರ್ ವಾರ್

    ಫೇಕ್ ರಮ್ಯಾ ವಿರುದ್ದ ಮುಂದುವರೆದ ಜಗ್ಗೇಶ್ ಟ್ವೀಟರ್ ವಾರ್

    ಬೆಂಗಳೂರು ಫೆಬ್ರವರಿ 7: ನವರಸ ನಾಯಕ ಜಗ್ಗೇಶ್ ಹಾಗೂ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಮಧ್ಯೆ ನಡೆಯುತ್ತಿರುವ ಟ್ವಿಟ್ಟರ್ ವಾರ್ ಮುಂದುವರಿದಿದೆ.

    ಮಂಗಳವಾರ ಮಾಜಿ ಸಂಸದೆ ರಮ್ಯಾ ಫೇಕ್ ಫೇಸ್‍ಬುಕ್ ಅಕೌಂಟ್ ಬಗ್ಗೆ ಪಾಠ ಮಾಡಿದ್ದಕ್ಕೆ ಜಗ್ಗೇಶ್ ಟೀಕೆ ವ್ಯಕ್ತಪಡಿಸಿದ್ದಾರೆ.
    ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದೆ ರಮ್ಯಾ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ನಿಯಂತ್ರಣದ ಕುರಿತು ಪಾಠ ಮಾಡುತ್ತಿದ್ದು, ಈ ವೇಳೆ ಟ್ವಿಟರ್‌ ಹಾಗೂ ಫೇಸ್‌ಬುಕ್‌ ನಲ್ಲಿ ಮೂರ್ನಾಲ್ಕು ಫೇಕ್‌ ಅಕೌಂಟ್‌ ತೆರೆಯುವಂತೆ ರಮ್ಯಾ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರ್ದೇಶನ ನೀಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.

    ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಟ್ವಿಟರ್‌ನಲ್ಲಿ ‘ಫೇಕು’ ಎಂದು ನಿಂದಿಸಿದ್ದ ರಮ್ಯಾ ಈಗ ತಾವೇ ಫೇಕ್‌ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದಾರೆ.

    ಸರಣಿ ಟ್ವೀಟ್‍ಗಳ ಮೂಲಕ ರಮ್ಯಾಗೆ ಜಗ್ಗೇಶ್ ಪರೋಕ್ಷ ಟಾಂಗ್ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply