LATEST NEWS
ಸರಕಾರಿ ನೌಕರನಾಗಿ ನಾನು ಮಠದಲ್ಲಿ ಇರಲಾರೆ – ಪೇಜಾವರ ಶ್ರೀ
ಸರಕಾರಿ ನೌಕರನಾಗಿ ನಾನು ಮಠದಲ್ಲಿ ಇರಲಾರೆ – ಪೇಜಾವರ ಶ್ರೀ
ಉಡುಪಿ ಫೆಬ್ರವರಿ 7: ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸುವ ಸರಕಾರದ ಚಿಂತನೆಗೆ ಪೇಜಾವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ಮಠಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸಲು ಹೊರಟಿರುವ ಸರಕಾರದ ನಡೆಗೆ ವಿರೋದ ವ್ಯಕ್ತಪಡಿಸಿದರು. ಇದು ಸರಕಾರದ ಹಿಂದೂ ವಿರೋಧ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಇದು ಸರಕಾರವೇ ವಿಪಕ್ಷಗಳಿಗೆ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ ಎಂದು ಹೇಳಿದರು. ನಾನು ಇದರ ವಿರುದ್ಧ ಹೋರಾಟ ಮಾಡಲ್ಲ ಇದನ್ನು ಜನತೆಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ಜಾತ್ಯಾತೀತ ಸರಕಾರ ಈ ರೀತಿ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ ಪೇಜಾವರ ಶ್ರೀಗಳು ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು ಎಂದು ಹೇಳಿದರು. ಆದರೆ ಜಾತ್ಯಾತೀತ ಎಂದು ಹೇಳುವ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಒಂದು ವೇಳೆ ಉಡುಪಿ ಶ್ರೀ ಕೃಷ್ಣಮಠವನ್ನು ಸ್ವಾಧೀನಪಡಿಸಿದರೆ, ನಾನು ಮಠದಿಂದ ಹೊರಬರುವೆ ಎಂದು ಹೇಳಿದ ಪೇಜಾವರ ಶ್ರೀಗಳು ಸರಕಾರದ ನೌಕರನಾಗಿ ನಾನು ಮಠದಲ್ಲಿ ಇರಲಾರೆ ಎಂದರು.
You must be logged in to post a comment Login