Connect with us

  BANTWAL

  ತುಳುನಾಡು ಪರಶುರಾಮ ಸೃಷ್ಟಿಯ ಶಕ್ತಿ ಮಹಿಮೆ: ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ 

  ಬಂಟ್ವಾಳ:  ತುಳುನಾಡಿನಲ್ಲಿ ಪರಶುರಾಮ ಸೃಷ್ಟಿಯ ಶಕ್ತಿ ಮಹಿಮೆ, ಮಣ್ಣಿನ ಕಾರ್ಣಿಕ ವಿಶೇಷವಾಗಿದ್ದು, ಆಚರಣೆಗಳು, ನಡಾವಳಿಗಳು ಅದ್ಬುತವಾಗಿದೆ. ನಮಗೆ ಜಾತಿ ಮುಖ್ಯವಲ್ಲ, ಧರ್ಮ ಆಚರಣೆ ಅಗತ್ಯವಾಗಿದ್ದು, ಸಾಮರಸ್ಯದ ಬದುಕು ಬೇಕಾಗಿದೆ. ಶ್ರೀ ಮಹಾಲಿಂಗೇಶ್ವರ ದೇಹದ ಒಳಗಿದ್ದರೆ ಶಿವ, ಶಿವ ದೇವರು ದೇಹದಿಂದ ಹೊರಗೆ ಹೋದರೆ ದೇಹ ಶವವಾಗುತ್ತದೆ ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

   

  ಅವರು ಬಂಟ್ವಾಳ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಂತದ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತಂಭ(ಕೊಡಿಮರ)ದ ತೈಲಾಧಿವಾಸ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ದೇವಾಲಯದ ಪುನರ್ ಪ್ರತಿಷ್ಠಾಪನೆ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಜೊತೆಯಾಗಿ ಕೈ ಜೋಡಿಸಬೇಕು. ದೇವಸ್ಥಾನದ ಮುಂಭಾಗದಲ್ಲಿ ಕೊಡಿಮರ ಸಾವಿರಾರು ವರ್ಷ ಉಳಿಯಲಿದ್ದು, ಅಂತಹ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಪ್ರಾರ್ಥನ ಮಂದಿರದಲ್ಲಿ ನಡೆಯುವ ಪ್ರಾರ್ಥನೆ ಜಗತ್ತಿನ ಏಳಿಗೆಗೆ ಸಹಾಯಕವಾಗಲಿದೆ. ಬದುಕಿನುದ್ದಕ್ಕೂ ಪ್ರತಿಯೊಂದು ಜೀವನಕ್ಕೂ ಬೆಲೆ ನೀಡಿ ಗೌರವದಿಂದ ಕಾಣಬೇಕಾಗಿದೆ. ತುಂಬೆಯ ಮಹಾಲಿಂಗೇಶ್ವರನ ಪುಣ್ಯದ ಮಣ್ಣಿನಲ್ಲಿ ನಾವು ಮಾಡಿದ ತೈಲಾಧಿವಾಸ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪುಣ್ಯ ಸಂಪಾದನೆಗಾಗಿ ದೇವಸ್ಥಾನಕ್ಕೆ ಹೋಗುವುದು, ಇದು ನಮ್ಮ ಬದುಕಿನ ಸತ್ಯವಿಚಾರ. ಇದು ಮುಂದಿನ ಪೀಳಿಗೆಗೆ ತಿಳಿಯಬೇಕಾಗಿದೆ. ಆಚಾರ, ವಿಚಾರಗಳ ಬಗ್ಗೆ ಸತ್ಯದ ಮನದಟ್ಟು ಮಾಡುವ ಕೆಲಸ ಆಗಬೇಕಾಗಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply