FILM
ತುಳು ಸಿನೆಮಾ ಶೂಟಿಂಗ್ ಗೆ ಮಂಗಳೂರಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ
ಮಂಗಳೂರು ಜನವರಿ 14: ತುಳು ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಸುನಿಲ್ ಶೆಟ್ಟಿ ಬಣ್ಣ ಹಚ್ಚುತ್ತಿದ್ದಾರೆ.
ನಟ,ನಿರ್ದೇಶಕ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ತುಳು ಚಿತ್ರದಲ್ಲಿ ಸುನಿಲ್ ಶೆಟ್ಟಿ ನಟಿಸಲಿದ್ದಾರೆ. ಈ ವೇಳೆ ಮಾತನಾಡಿದ ಅವರು ತುಳು ಚಿತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಹಿಂದೆಯೇ ಇತ್ತು, ಜೈ ಚಿತ್ರದ ಕಥೆಯನ್ನು ರೂಪೇಶ್ ಶೆಟ್ಟಿ ಹೇಳಿದ್ದರು, ಕಥೆ ಖುಷಿಯಾದ ಕಾರಣ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದೇನೆ ಎಂದರು. ತುಳು ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ, ತುಳು ಚಿತ್ರರಂಗಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ಕನ್ನಡ ಚಿತ್ರಗಳಲ್ಲಿ ನಟಿಸಲು ಆಫರ್ ಗಳು ಬಂದಿತ್ತು, ಆದರೆ ನೆಗೆಟಿವ್ ರೋಲ್ ನಲ್ಲಿ ನಟಿಸುವ ಆಫರ್ ಬಂದಿತ್ತು. ನನಗೆ ನೆಗೆಟಿವ್ ರೋಲ್ ನಲ್ಲಿ ನಟಿಸಲು ಇಷ್ಟವಿಲ್ಲದ ಕಾರಣ ಆಫರ್ ಸ್ವೀಕರಿಸಿಲ್ಲ. ಮುಂದಿನ ದಿನಗಳಲ್ಲಿ ಪಾಸಿಟಿವ್ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದರು.