Connect with us

    LATEST NEWS

    ವೈರಲ್ ಆದ ಪದ್ಮಪ್ರಶಸ್ತಿ ಸಮಾರಂಭದಲ್ಲಿನ ವೃಕ್ಷ ಮಾತೆ ತುಳಸಿ ಗೌಡ ಅವರ ಪೋಟೋ

    ನವದೆಹಲಿ – ಈ ಬಾರಿಯ ಪದ್ಮಪ್ರಶಸ್ತಿ ಸಮಾರಂಭಕ್ಕೆ ಮೆರಗು ನೀಡಿದವರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಅಕ್ಷರ ಸಂತ ಹಾಜಬ್ಬ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯದ ವೃಕ್ಷ ಮಾತೆ ತುಳಸಿ ಗೌಡ, ಈ ನಡುವೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಮುಂದಾದ ವೇಳೆ ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕುಳಿತಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಚಿವರಿಗೆ ಅವರಿಗೆ ನಮನ ಸಲ್ಲಿಸಿದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಪರಿಸರ ರಕ್ಷಣೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಾಳಿ ಗ್ರಾಮದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ ಅವರು ರಸ್ತೆ ಬದಿಯಲ್ಲಿ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿದ್ದಾರೆ. ವೃಕ್ಷ ಮಾತೆ ಎಂದೆ ಹೆಸರು ಪಡೆದ ತುಳಸಿ ಗೌಡ ಅವರು ಮರ ನೆಡುವುದರ ಜೊತೆಗೆ ಅನೇಕ ಸಸ್ಯ ಮತ್ತು ಗಿಡಮೂಲಿಕೆಗಳ ಕುರಿತು ಮಾಹಿತಿಯನ್ನು ಹೊಂದಿದ್ದಾರೆ. ಅಲ್ಲದೇ ಇವರು ಅರಣ್ಯಗಳ ವಿಶ್ವಕೋಶ ಎಂದು ಖ್ಯಾತಿ ಪಡೆದಿದ್ದಾರೆ. ಈ ಹಿನ್ನವೆ ಪರಿಸರ ಕಾಳಜಿ ಹೊಂದಿರುವ ಅವರ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.


    2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನಿನ್ನೆ ಅಂದರೆ ನವೆಂಬರ್​ 8ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ​ ಅವರಿಂದ ಅವರು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಲು ಮುಂದಾದ ವೇಳೆ ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕುಳಿತಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಚಿವರಿಗೆ ಅವರಿಗೆ ನಮನ ಸಲ್ಲಿಸಿದರು. ಈ ಫೋಟೋ ನೆಟ್ಟಿಗರ ಮನಗೆದ್ದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply