LATEST NEWS
ಮಂಗಳೂರು – ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ – ಪತಿ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಮಂಗಳೂರು ನವೆಂಬರ್ 22: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ದೈಹಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಲ್ಲೆ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೊಂದ ಮಹಿಳೆ ದೂರಿನ ಪ್ರಕಾರ ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪದ ನಿವಾಸಿ ಮೊಹಮ್ಮದ್ ದಿಲ್ ಪಾಜ್ ನ್ನು ಮಹಿಳೆ 2019ರಲ್ಲಿ ಮದುವೆಯಾಗಿದ್ದರು, ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಿಲ್ ಫಾಜ್ ತಮ್ಮ ಹೆಂಡತಿ ಜೊತೆ ಅನೋನ್ಯವಾಗಿಯೇ ಇದ್ದ,,ಈ ನಡುವೆ ದಿಲ್ ಫಾಜ್ ಅನ್ಯ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದ ಮೇಲೆ, ಕುಟುಂಬದ ಹಿರಿಯರು ಸೇರಿ ದಿಲ್ಪಾಜ್‌ಗೆ ಬುದ್ದಿವಾದ ಹೇಳಿದ್ದರು. ನಂತರವೂ ಸುಧಾರಿಸದ ದಿಲ್ವಾಜ್‌ನನ್ನು, ನ.8ರಂದು ಹೀನಾ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಪ್ರಶ್ನಿಸಿದಾಗ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ದಿನ ರಾತ್ರಿ ಸಬೀಲ್ ಅಹಮ್ಮದ್ ಅವರನ್ನು ತನ್ನ ಮನೆಗೆ ಕರೆದು, ಅವರ ಎದುರಿನಲ್ಲಿ ಪತ್ನಿ ಹೀನಾಗೆ ಮೂರು ಬಾರಿ ತಲಾಖ್ ಹೇಳಿ ‘ನೀನು ನನ್ನ ಪತ್ನಿಯಲ್ಲ’ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.