LATEST NEWS
ಮಂಗಳೂರು – ತ್ರಿಬಲ್ ರೈಡಿಂಗ್ – ಡಿವೈಡರ್ ಗೆ ಬೈಕ್ ಡಿಕ್ಕಿ ಇಬ್ಬರು ವಿಧ್ಯಾರ್ಥಿಗಳು ಸಾವು

ಮಂಗಳೂರು ಎಪ್ರಿಲ್ 08: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಇಬ್ಬರು ವಿಧ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆ ಇಂದು ಮುಂಜಾನೆ ಕುಂಟಿಕಾನ ಹಾಗೂ ಕೆಪಿಟಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಅಪಘಾತದಲ್ಲಿ ಇನ್ನೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ವಿದ್ಯಾರ್ಥಿಗಳಾದ ಸಂಕೀರ್ತ್ (23) ಹಾಗೂ ಧನುರ್ವೇದ್ (19) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ವಿದ್ಯಾರ್ಥಿ ಸಿಬಿ ಸ್ಯಾಮ್ (22) ಗಾಯಗೊಂಡಿದ್ದಾರೆ. ಈ ಮೂರು ವಿದ್ಯಾರ್ಥಿಗಳು ಕೇರಳದವರು ಎಂದು ತಿಳಿದು ಬಂದಿದೆ.

ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಈ ಮೂವರು ವಿದ್ಯಾರ್ಥಿಗಳು ಕುಂಟಿಕಾನದಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದರು. ಯಾರೂ ಹೆಲ್ಕೆಟ್ ಧರಿಸಿರಲಿಲ್ಲ. ಅತಿವೇಗದಿಂದ ಸಾಗಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಸವಾರ ಸಂಕೀರ್ತ್ ಅವರ ತಲೆ ರಸ್ತೆ ವಿಭಜಕಕ್ಕೆ ಬಡಿದಿತ್ತು. ಸಹ ಸವಾರ ಧನುರ್ವೇದ್ ಅವರ ತಲೆ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕ ಡಿಕ್ಕಿ ಹೊಡೆದಿತ್ತು. ಇಬ್ಬರ ತಲೆಗೂ ಬಲವಾದ ಏಟು ಬಿದ್ದಿತ್ತು. ಗಾಯಗೊಂಡಿದ್ದ ಅವರನ್ನು ಅವರ ಹಿಂದೆ ಇನ್ನೊಂದು ಬೈಕಿನಲ್ಲಿ ಬರುತ್ತಿದ್ದ ಗೆಳೆಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರು ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
1 Comment