Connect with us

DAKSHINA KANNADA

ಮನಾಲಿ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ರೈಲಿನಲ್ಲಿ ಕಿರುಕುಳ

Train-.jpg444ಮಂಗಳೂರು ಜುಲೈ 16:- ಮನಾಲಿ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ರೈಲಿನಲ್ಲಿ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲನಲ್ಲಿ ಪ್ರವಾಸಿಗರಿಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಕಿರಾತಕರು ದಾಂಧಲೆ ನಡೆಸಿದ್ದಾರೆ.ಕೊಡುಗು ಮೂಲದ 6 ಜನ ಪ್ರವಾಸಿಗರು ಮನಾಲಿಯಿಂದ ಹಿಂದಿರುಗುತ್ತಿದ್ದ ಸಂದರ್ಭ ಮುಂಬಯಿಯ ವಸಾಯಿರೋಡ್ ನಲ್ಲಿ ಈ ಘಟನೆ ನಡೆದಿದೆ. ಕೊಡಗಿನ ವಿ.ವೈ ಶ್ರೀಧರ್ ರಾವ್, ಪೂಜಾ ಆರ್, ಪ್ರಶಾಂತ್, ವಸೀಂ, ಮಣಿ ಹಾಗೂ ಗುಣಶ್ರೀ ಇತ್ತೀಚೆಗೆ ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ನಿಜಾಮುದ್ದೀನ್ ರೈಲಿನಲ್ಲಿ  ಹಿಂತಿರುಗುತ್ತಿದ್ದಾಗ ರೈಲಿನ ಒಳಗಡೆ ಕಿರಾತಕರ ತಂಡ ಸಿಗರೇಟು ಸೇವನೆ, ಮದ್ಯಪಾನ ಮಾಡುತ್ತಿತ್ತು. ಅದನ್ನು  ಪ್ರಶ್ನೆ ಮಾಡಿದ್ದಕ್ಕೆ ಕಿರುಕುಳ ನೀಡಿದ ದುಷ್ಕರ್ಮಿಗಳು , ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಚಿನ್ನದ ಚೈನ್ ನ್ನು ಅಪಹರಿಸಿದ್ದರು. ಇದ್ರಿಂದ ಪ್ರಯಾಣಿಕರು  ಟ್ರೈನ್ ನ ಚೈನ್ ಎಳೆದು ಟ್ರೈನ್ ನಿಲ್ಲಿಸಲು ಪ್ರಯತ್ನಪಟ್ಟಿದ್ದಾರೆ. ತುರ್ತು ಸಂದರ್ಭದಲ್ಲಿ ಚೈನ್ ಎಳೆದಾಗ ರೈಲನ್ನು ನಿಲುಗಡೆ ಮಾಡುವ ನಿಯಮವಿದೆ. ಆದರೆ ಪ್ರಯಾಣಿಕರು ಎಷ್ಟೇ ಬಾರಿ ಚೈನ್ ಎಳೆದರೂ ರೈಲು ಮಾತ್ರ ನಿಂತಿಲ್ಲ. ರೈಲು ಅಧಿಕಾರಿಗಳು ಸ್ಪಂದಿಸಿಲ್ಲ. ನಂತರ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಚೈನ್  ಎಳೆದಿದ್ದಕ್ಕೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ವಸಾಯ್ ರೋಡ್ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಲು ರೈಲ್ವೆ ಪೊಲೀಸರು ಮುಂದಾಗಿಲ್ಲ. ಇದರಿಂದ ಪ್ರತಿಭಟನೆ ನಡೆಸಿದ ಕರ್ನಾಟಕ ಮೂಲದ ಪ್ರವಾಸಿಗರು ರೈಲ್ವೆ ಪೊಲೀಸ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ನಡುವೆ ಪ್ರಯಾಣಿಕರಿಗೆ ತಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ರೈಲ್ವೆ ಪೊಲೀಸ್ ಬೇಜವಬ್ದಾರಿಯಿಂದ ವರ್ತಿಸಿದ್ದಾರೆ.ನಡೆದ ಘಟನೆಗಳ  ಮೊಬೈಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮಹಾರಾಷ್ಟ್ರ ಪೊಲೀಸ್ ಹಾಗೂ ರೈಲ್ವೆ ಪೊಲೀಸ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Facebook Comments

comments