Connect with us

    DAKSHINA KANNADA

    ಮಂಗಳೂರು : ನಂತೂರಿನಲ್ಲಿ ಮೀನಿನ ಕಂಟೇನರ್ ವಾಹನದ ನಿರ್ಲಕ್ಷ್ಯದ ಚಾಲನೆಗೆ ಪ್ರಾಣ ತೆತ್ತ ಸ್ಕೂಟಿ ಯುವತಿ..!

    ಮಂಗಳೂರು : ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ನಡೆದ ವಾಹನ ಅಪಘಾತದಲ್ಲಿ ಯುವತಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ. ಮೃತಳನ್ನು ನಗರದ ಕೋಡಿಕಲ್‌ನ 27 ವರ್ಷದ ಕ್ರಿಸ್ತಿ ಕ್ರಾಸ್ತಾ ಎಂದು ಗುರುತಿಸಲಾಗಿದೆ.

    ರವಿವಾರ ಅಪರಾಹ್ನ 3.30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು  ಕೋಡಿಕಲ್ ನಿವಾಸಿಯಾಗಿರುವ ಕುಮಾರಿ ಕ್ರಿಸ್ತಿ ಕ್ರಾಸ್ತಾ ರವರು ನಂತೂರು ಜಂಕ್ಷನ್ ನಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿರುವ ವೇಳೆ ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಬಿಲ್ಡಿಂಗಿನ ಎದುರು ಕೆ ಎಲ್ 11 ಬಿವಿ 4718 ನಂಬರಿನ ಹಸಿ ಮೀನು ಸಾಗಿಸುವ ಕಂಟೇನರ್ ವಾಹನವನ್ನು ಕ್ರಿಸ್ತಿ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಯುವತಿ ಕಂಟೇನರ್ ವಾಹನದ  ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ  ಸಾವನ್ನಪ್ಪದ್ದಾರೆ.

    ಕಂಟೇನರ್ ವಾಹನ ಚಾಲಕನ ಅಜಾಗೃತೆಯ ಚಾಲನೆಯೇ ಘಟನೆ ಕಾರಣವೆಂದು ಹೇಳಲಾಗಿದೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಮೊ. ಸಂಖ್ಯೆ 152/24 ಕಲ0 281, 106(1) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply