Connect with us

    LATEST NEWS

    ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ – ವಿಡಿಯೋ ವೈರಲ್

    ಉತ್ತರ ಪ್ರದೇಶ ಸೆಪ್ಟೆಂಬರ್ 30: ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ರೀಲ್ಸ್ ಮಾಡಲು ಹೋಗಿ ಯವಕನೊಬ್ಬ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕನನ್ನು ಉತ್ತರ ಪ್ರದೇಶದ ಜಹಾಂಗೀರಾಬಾದ್‌ನ ತೇರಾ ದೌಲತ್‌ಪುರ ನಿವಾಸಿ 14 ವರ್ಷದ ಮಗ ಫರ್ಮಾನ್‌ ಎಂದು ಗುರುತಿಸಲಾಗಿದೆ.


    ರೀಲ್ಸ್ ಗಾಗಿ ಫರ್ಮಾನ್ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ವೇಗವಾಗಿ ರೈಲೊಂದು ಬಂದಿದ್ದು, ಅದು ಫರ್ಮಾನ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಫರ್ಮಾನ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಣದಲ್ಲಿ ವೈರಲ್ ಆಗಿದೆ.


    ಯುವಕ ಫರ್ಮಾನ್ ದಾಮೆದರ್‌ಪುರ ಗ್ರಾಮದ ಪಕ್ಕದ ರೈಲ್ವೆ ಕ್ರಾಸಿಂಗ್ ಬಳಿ ರೈಲು ಹಳಿಗಳ ಬಳಿ ನಿಂತು ರೀಲ್‌ಗಳನ್ನು ತಯಾರಿಸಲು ಆಯ್ಕೆ ಮಾಡಿಕೊಂಡಿದ್ದು ಅಪಘಾತಕ್ಕೆ ದಾರಿ ಮಾಡಿಕೊಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ

    VIDEO

     

    Share Information
    Advertisement
    Click to comment

    You must be logged in to post a comment Login

    Leave a Reply