LATEST NEWS
ಯಮರಾಜ ರಜೆಯಲ್ಲಿದ್ದಿರಬೇಕು – ಫುಲ್ ಟೈಟ್ ಆಗಿ ರೈಲ್ವೆ ಟ್ರ್ಯಾಕ್ ಮೇಲೆ ನಿದ್ರೆ – ರೈಲು ಹೋಗಿದ್ರು ಬಚಾವ್
ಉತ್ತರಪ್ರದೇಶ ಅಗಸ್ಟ್ 08: ಕಂಠಪೂರ್ತಿ ಕುಡಿದು ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ರೈಲೊಂದು ಸಂಚರಿಸಿದ್ದು, ಪವಾಡಸದೃಶವಾಗಿ ವ್ಯಕ್ತಿ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ ಘಟನೆ ಗುರುವಾರ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ರೈಲ್ವೆ ಹಳಿ ಮೇಲೆ ಕಂಠಪೂರ್ತಿ ಕುಡಿದು ಮಲಗಿದ್ದಾನೆ. ಈ ವೇಳೆ ರೈಲೊಂದು ಸಂಚರಿಸಿದೆ. ಈ ರೈಲಿನ ಲೋಕೋಪೈಲೆಟ್ ಪೊಲೀಸ್ ರಿಗೆ ಕರೆ ಮಾಡಿ ಆದಂಪುರ ರೈಲ್ವೇ ಕ್ರಾಸಿಂಗ್‌ನಲ್ಲಿ ವ್ಯಕ್ತಿಯೊಬ್ಬರು ರೈಲಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯನ್ನು ಹುಡುಕಿಕೊಂಡು ಬಂದ ಸಂದರ್ಭ ಪೊಲೀಸರಿಗೆ ಶಾಕ್ ಆಗಿದ್ದು, ಪುಲ್ ಟೈಟ್ ಆಗಿದ್ದ ವ್ಯಕ್ತಿ ಟ್ರ್ಯಾಕ್ ಮೇಲೆ ಆರಾಮವಾಗಿ ಮಲಗಿದ್ದಾನೆ. ಪೊಲೀಸರು ಬಂದು ಆತನನ್ನು ಎಬ್ಬಿಸಿದ್ದಾರೆ. ಆತ ಎಷ್ಟು ಕುಡಿದಿದ್ದಾನೆ ಅಂದರೆ ಆತನ ಮೇಲೆ ರೈಲು ಹೋಗಿದ್ದು ಆತನಿಗೆ ತಿಳಿದಿಲ್ಲ. ಪೊಲೀಸರು ಬಂದ ಬಳಿಕ ಎದ್ದು ಹೋಗಿದ್ದಾನೆ. ನೇಪಾಳದ ಅಮರ್ ಬಹದ್ದೂರ್ ಎಂದು ಗುರುತಿಸಲಾಗಿದೆ.
जब यमराज जी छुट्टी पर हों तो ऐसा होता है…
UP के जिला बिजनौर में एक शख्स नशे में रेल पटरी पर सो गया। ट्रेन ऊपर से गुजर गई। लोको पायलट ने पुलिस को सूचना भिजवाई कि एक व्यक्ति संभवत ट्रेन से कट गया है। पुलिस पहुंची तो वो नशे में सोता मिला। pic.twitter.com/43j6Bm0lW7
— Sachin Gupta (@SachinGuptaUP) August 8, 2024
You must be logged in to post a comment Login