Connect with us

    LATEST NEWS

    ನಿಮ್ಮ ಬಂಡವಾಳ ನಾವು ಬಯಲು ಮಾಡ್ತೇವೆ – ಬಿ ಕೆ ಇಮ್ತಿಯಾಜ್ ವಿರುದ್ದ SDTU ಆಕ್ರೋಶ

    ಮಂಗಳೂರು ಅಗಸ್ಟ್ 08: ಬೀದಿ ಬದಿ ವ್ಯಾಪಾರಿಗಳ ಹೋರಾಟದ ವೇಳೆ ಎಸ್ ಡಿಟಿಯು ಸಂಘಟನೆ ವಿರುದ್ದ ಬಿ ಕೆ ಇಮ್ತಿಯಾಜ್ ಸಾರ್ವಜನಿಕವಾಗಿ ತೇಜೋವದೆ ಮಾಡಿರುವುದು ಖಂಡನೀಯ ಎಂದು SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ತಿಳಿಸಿದ್ದಾರೆ.


    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ನಡೆಸುವುದನ್ನು ಹಾಗೂ ವಿವಿಧ ಬೇಡಿಕೆಗಳನ್ನು ಇರಿಸಿ ನಗರ ಪಾಲಿಕೆ ಕಛೇರಿ ಚಲೋ ಹಾಗೂ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಇದರ ಆಯೋಜಕರು ಕಾರ್ಮಿಕ ಸಂಘಟನೆಯಾದ SDTU ಸಂಘಟನೆಗೆ ಅಧಿಕೃತವಾಗಿ ವಾಟ್ಸನ್ ವಾಯ್ಸ್ ಮುಖಾಂತರ ಮತ್ತು ಜಿಲ್ಲಾ ನಾಯಕರಿಗೆ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಬರುವಂತೆ ಆಹ್ವಾನ ನೀಡಿದ್ದರು. ಪ್ರತಿಭಟನೆಯ ಆಯೋಜಕರ ಮಾತಿಗೆ ಗೌರವ ನೀಡಿ ನಮ್ಮ ಕಾರ್ಯಕರ್ತರು ನಾಯಕರ ಸೂಚನೆಯಂತೆ ಧ್ವಜದೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ CPIM ನಾಯಕರಿಬ್ಬರು ಆಹ್ವಾನಿಸಿ ಬಂದ SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವದೆ ಮಾಡಿರುವುದು ಖಂಡನೀಯ ಎಂದರು


    ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಸಮಾನ ಮನಸ್ಕ ಸಂಘಟನೆಗಳಿಗೂ ಮೊದಲೇ ತಿಳಿದಿತ್ತು. ಆದರೆ ಆ ಸಂದರ್ಭದಲ್ಲಿ ಪ್ರತಿಭಟನೆಯ ಆಯೋಜಕರಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ಅಧಿಕೃತರೊಂದಿಗಾಗಲಿ ಯಾವುದೇ ಆಕ್ಷೇಪಣೆ ಸಲ್ಲಿಸದ ಈ ಸೋಕಾಲ್ಡ್ ನಾಯಕರು ಪ್ರತಿಭಟನೆ ಆರಂಭವಾಗಿ ತಮ್ಮ ಭಾಷಣದ ಸಂದರ್ಭದಲ್ಲಿ ಎಸ್‌ಡಿಟಿಯುನ ಧ್ವಜವನ್ನು ಕಂಡಾಗ ತನ್ನ ರಾಜಕೀಯ ಕುಬುದ್ಧಿಯನ್ನು ತೋರಿಸುವ ಮೂಲಕ ಪ್ರತಿಭಟನೆಯ ಉದ್ದೇಶವನ್ನು ಹಾಳುಗೆಡವಿ ಟೈಗರ್ ಕಾರ್ಯಾಚರಣೆಗೆ ವಿರುದ್ಧ ಇರುವಂತೆ ನಾಟಕ ಮಾಡಿ ಹಿಂಬಾಗಿಲ ಮೂಲಕ ಬಿಜೆಪಿಯ ಪರವಾಗಿ ನಿಂತುಕೊಂಡಿರುವುದು ಸ್ಪಷ್ಟವಾಗಿದೆ, ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಇಮ್ಮಿಯಾಝ್ ರವರಿಗೆ ಎಸ್‌ಡಿಟಿಯು ಕಾರ್ಮಿಕ ಸಂಘಟನೆಯ ಧ್ವಜ ಕಂಡೊಡನೆ ತನ್ನ ಅಸಹನೆ ಹೊರಹಾಕಿ ಕೇವಲವಾಗಿ ನಡೆದುಕೊಂಡು ಈ ಹಿಂದೆ ಹಲವಾರು ಹೋರಾಟಗಳನ್ನು ಹೈಜಾಕ್ ಮಾಡಿದ ಅದೇ ದಿಕ್ಕಿನಲ್ಲಿ ಈ ಹೋರಾಟವನ್ನೂ ಕೊಂಡೊಯ್ಯುವ ಶೈಲಿಯಲ್ಲಿ ಇದ್ದಾರೆ. ಮೈಕ್ ಸಿಕ್ಕ. ತಕ್ಷಣ ಹೋರಾಟಗಾರರ ಸೋಗಿನಲ್ಲಿ ಬಂದು ಸಮಯ ಸಾಧಕಕನ ಇಂತಹ ನಾಲಾಯಕರನ್ನು ಹೊರಗಿಟ್ಟು ಬೀದಿ ವ್ಯಾಪಾರಸ್ತರಿಗೆ ನ್ಯಾಯವನ್ನು ಕೊಡಿಸಲು ಎಸ್‌ಡಿಟಿಯು ಬದ್ಧವಾಗಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply