KARNATAKA
ಲೋಕೋಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ…!!
ಬೆಂಗಳೂರು ಸೆಪ್ಟೆಂಬರ್ 21: ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಪ್ಯಾಸೆಂಜರ್ ರೈಲೊಂದು ಕಂಟೈನರ್ ಲಾರಿಗೆ ಗುದ್ದಿರುವ ಘಟನೆ ನಡೆದಿದ್ದು, ಲೋಕೋಪೈಲೆಟ್ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ. ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ಈ ದುರ್ಘಟನೆ ಸಂಭವಿಸಿದೆ.
ಮೂಲಗಳ ಪ್ರಕಾರ ಈ ಮಾರ್ಗದಲ್ಲಿ ಎರಡು ಹಳಿಗಳು ನಿರ್ಮಾಣ ಕಾರ್ಯ ಪ್ರಗತಿಲ್ಲಿತ್ತು. ಒಂದು ಹಳಿ ಮೇಲೆ ರೈಲು ಸಂಚರಿಸುತಿತ್ತು. ಸಂಜೆ ಅದೇ ಹಳಿ ಮೇಲೆ ಕಂಟೈನರ್ ದಾಟಲು ಯತ್ನಿಸಿದ್ದಾಗ ಹಳಿ ಮೇಲೆ ಕಂಟೈನರ್ ನಿಂತು ಚಕ್ರವೊಂದು ಸಿಲುಕಿತ್ತು. ರೈಲು ಬರುತ್ತಿದ್ದನ್ನು ಕಂಡು ಚಾಲಕ ಓಡಿ ಹೋಗಿದ್ದ. ಆ ಬಳಿಕ, ರೈಲು ಕಂಟೈನರ್ ಗೆ ಗುದ್ದಿದೆ. ಪರಿಣಾಮ ಕಂಟೈನರ್ ಸಂಪೂರ್ಣ ಜಖಂಗೊಂಡಿದೆ. ಆದರೆ, ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು, ರೈಲು ಚಾಲಕ ತುರ್ತು ಬ್ರೇಕ್ ಹಾಕಿದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಟ್ರಕ್‌ನ ಚಕ್ರಗಳು ರೈಲ್ವೆ ಹಳಿಗಳ ಮೇಲೆ ಲೋಕೋ ಕೆಳಗೆ ಬಿದ್ದಿರುವುದರಿಂದ ಲಾರಿಗೆ ಸಾಕಷ್ಟು ಹಾನಿಯಾಗಿದೆ ಎಂದು ಹೇಳಿದರು.
ಇನ್ನು ಅಪಘಾತದಿಂದಾಗಿ ಈ ಮಾರ್ಗದಲ್ಲಿ ಬರೊಬ್ಬರಿ 4 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಮತ್ತು ರೈಲ್ವೇ ಸಿಬ್ಬಂದಿ ರೈಲು ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಬಳಿಕ ಸುಮಾರು 4 ಗಂಟೆಗಳ ಬಳಿಕ ಅಂದರೆ ಮಧ್ಯರಾತ್ರಿ 12.30ರ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮಾರ್ಗದಲ್ಲಿ ಮತ್ತೆ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು