Connect with us

    LATEST NEWS

    ದಿನಕ್ಕೊಂದು ಕಥೆ- ಹುಡುಕಾಟ

    ಹುಡುಕಾಟ

    ಜಲ್ಲಿಗಳ ಮೇಲೆ ಮಲಗಿರುವ ಹಳಿ ಮೌನವಾಗಿದೆ .ಬಂಡಿ ಚಲಿಸುವಾಗ ಒಂದಷ್ಟು ಶಬ್ದವನ್ನು ಸೃಷ್ಟಿಸಿ ಮತ್ತೆ ಮೌನವಾಗುತ್ತದೆ. ಆ ಮೌನದ ನಡುವೆ ಅಲ್ಲೆರಡು ಜೀವಗಳು ಮಾತುಕತೆಗೆ ಇಳಿದಿವೆ. ಇಲ್ಲಿ ಮೌನವೇ ಮಾತನಾಡುತ್ತಿದೆ. ಇಬ್ಬರು ನೇರವಾಗಿರುವ ಹಳಿಗಳನ್ನು ದಿಟ್ಟಿಸುತ್ತಾ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.

    ಪ್ರೀತಿ ಹುಟ್ಟಿ ಮರವಾಗಲು ಕಾರಣ ಇಬ್ಬರ ಕನಸುಗಳು. ಅವಳಿಗೆ ಜೀವನದಲ್ಲಿ ಒಂದೇ ಆಸೆ ಮನೆಯೊಂದ ಕಟ್ಟಬೇಕು.
    ಅದಕ್ಕೆ ಜೊತೆಯಾಗುತ್ತೇನೆ ಎಂದೇ ಅವನು ಪ್ರೀತಿಸಿದ್ದು. ಈಗ ಮನೆ ನಿಭಾಯಿಸೋಕೆ ದುಡಿಯುತ್ತಿದ್ದ ಅವಳಿಗೆ ಮೊದಲೇ ಸಾಲದ ಹೊರೆ, ಆದರೆ ಪ್ರೀತಿಯನ್ನು ಯಥೇಚ್ಛವಾಗಿ ನೀಡಿದ್ದಾಳೆ. ಇವನು ಬಸ್ಸಿನ ಸ್ಟೇರಿಂಗ್ ಹಿಡಿದು ಜೀವನ ಚಕ್ರವನ್ನು ತಿರುಗಿಸುತ್ತಿರೋನು.

    ಅವನು ಅವಳ ಸೌಂದರ್ಯಕ್ಕೆ ಮರುಳಾದವನಲ್ಲ, ಸ್ಪರ್ಶ ಸುಖಕ್ಕೆ ಕೈಹಿಡಿದವನಲ್ಲ. ಮನೆಯೊಂದರ ಕನಸುಕಂಡವಳ ಕನಸಿಗೆ ತಾನೂ ಜೊತೆಯಾಗುವ ಒಪ್ಪಿಗೆಗೆ ಪ್ರೀತಿಸಿದ್ದಾನೆ. ಇಲ್ಲೊಂದು ನಿಷ್ಕಲ್ಮಶ ಪ್ರೀತಿ ಬೆಳೆಯುತ್ತಿದೆ. ಕನಸುಗಳೇ ಇಲ್ಲಿ ಪ್ರೀತಿ ಹುಟ್ಟಿಸಿದೆ ,ಕನಸುಗಳೇ ಇಲ್ಲಿ ಬದುಕ ನಡೆಸುತ್ತಿವೆ, ಕನಸುಗಳೇ ಕನಸ ಜೊತೆಯಾಗಲು ಕಾಯುತ್ತಿವೆ. ಮೋಡ ಹನಿವ ಸೂಚನೆ ಸಿಕ್ಕಿದೆ, ಕೈ ಹಿಡಿದು ನಡೆದಿದ್ದಾರೆ ಹಳಿಗಳ ತರಹ ಜೊತೆಯಾಗಿ. ಕನಸು ಬದುಕಿಸುತ್ತಿದೆ…

    Share Information
    Advertisement
    Click to comment

    You must be logged in to post a comment Login

    Leave a Reply