LATEST NEWS
ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ಅವರ ಸಾಮಾಜಿಕ ಕಳಕಳಿಗೆ ಪೊಲೀಸ್ ಕಮಿಷನರ್ ಅವರಿಂದ ಬಹುಮಾನ

ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ಅವರ ಸಾಮಾಜಿಕ ಕಳಕಳಿಗೆ ಪೊಲೀಸ್ ಕಮೀಷನರ್ ಅವರಿಂದ ಬಹುಮಾನ
ಮಂಗಳೂರು ಫೆಬ್ರವರಿ 24: ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ರಸ್ತೆಯಲ್ಲಿಯ ಕಬ್ಬಿಣದ ಪಟ್ಟಿಯನ್ನು ಸರಿ ಮಾಡಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರೇವಣ ಸಿದ್ದಪ್ಪ ಅವರಿಗೆ ಮಂಗಳೂರು ಪೊಲೀಸ್ ಕಮಿಷನರ್ ಬಹುಮಾನ ನೀಡಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿಯ ಕಾಂಕ್ರಿಟ್ ರಸ್ತೆಯ ಕಬ್ಬಿಣದ ಪಟ್ಟಿಯೊಂದು ಮೇಲೆದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಕೊಡುತ್ತಿತ್ತು, ಈ ಹಿನ್ನಲೆಯಲ್ಲಿ ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ದ್ವಿಚಕ್ರ ವಾಹನ ಸವಾರರ ಕಷ್ಟವನ್ನು ಕಂಡು ತಾವೇ ರಸ್ತೆಯಿಂದ ಮೇಲ್ಲೆದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಲು ಶ್ರಮಿಸಿದರು, ಅಲ್ಲದೆ ಕಬ್ಬಿಣದ ಪಟ್ಟಿಯಿಂದಾಗಿ ಮುಂದಾಗುವ ಅನಾಹುತ ತಪ್ಪಿಸಿದ್ದರು.

ಅವರ ಈ ಕೆಲಸದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಅವರು ರೇವಣ ಸಿದ್ದಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ 5 ಸಾವಿರ ರೂಪಾಯಿಗಳ ಬಹುಮಾನ ನೀಡಿದ್ದಾರೆ.
ನಂತರ ಮಾತನಾಡಿದ ಪೊಲೀಸ್ ಕಮಿಷನರ್ ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಕಳಕಳಿಯನ್ನು ತೋರಿಸಿದ ರೇವಣ ಸಿದ್ದಪ್ಪ ಅವರ ಸೇವೆ ಮೆಚ್ಚುಗೆ ಸೂಚಿಸುವಂತದ್ದಾಗಿದೆ ಎಂದರು.
VIDEO