LATEST NEWS
ವಿಧ್ಯಾರ್ಥಿ ಸಸ್ಪೆಂಡ್ ಮಾಡಿರುವುದು ಸರಿಯಲ್ಲ – ರಮಾನಾಥ ರೈ
ವಿಧ್ಯಾರ್ಥಿ ಸಸ್ಪೆಂಡ್ ಮಾಡಿರುವುದು ಸರಿಯಲ್ಲ – ರಮಾನಾಥ ರೈ
ಉಡುಪಿ ಫೆಬ್ರವರಿ 24: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಂಡಲ್ ಶಾ ಎಂದು ಟೀಕಿಸಿದ್ದ ವಿಧ್ಯಾರ್ಥಿಯನ್ನು ಸಸ್ಪೆಂಡ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅರಣ್ಯ ಸಚಿವ ರಮಾನಾಥ ತಿಳಿಸಿದ್ದಾರೆ.
ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿ ಜಸ್ಟಿನ್ ಸೆಬಾಸ್ಟಿನ್ ನ್ನು ಸಸ್ಪೆಂಡ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಮಾನಾಥ ರೈ ಶಿಕ್ಷಣ ಸಂಸ್ಥೆ ಸಮಾಜವನ್ನು ಸುಶಿಕ್ಷಿತರನ್ನಾಗಿಸಬೇಕು ಅದು ಬಿಟ್ಟು ವಿಧ್ಯಾರ್ಥಿಯನ್ನು ಸಸ್ಪೆಂಡ್ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ವಿಧ್ಯಾರ್ಥಿಯಿಂದ ತಪ್ಪಾಗಿದ್ದರೆ ಕೂತು ಪರಿಹರಿಸಬಹುದಿತ್ತು ಎಂದರು. ಅದು ಖಾಸಗಿ ಶಿಕ್ಷಣ ಸಂಸ್ಥೆ, ಅವರ ವಿವೇಚನೆ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ಯ ವಿಚಾರ ಮಾತಾಡಿದಾಗ ಜನರು ಟೀಕಿಸುತ್ತಾರೆ, ಆದರೆ ಅಂತಹ ವಾತಾವರಣ ದೇಶದಲ್ಲಿರುವುದು ನಿಜ ಎಂದು ಹೇಳಿದರು.
You must be logged in to post a comment Login