LATEST NEWS
ಅಮಿತ್ ಶಾ ವಿರುದ್ದ ಕಮೆಂಟ್ ವಿಧ್ಯಾರ್ಥಿ ಸಸ್ಪೆಂಡ್
ಅಮಿತ್ ಶಾ ವಿರುದ್ದ ಕಮೆಂಟ್ ವಿಧ್ಯಾರ್ಥಿ ಸಸ್ಪೆಂಡ್
ಪುತ್ತೂರು ಫೆಬ್ರವರಿ 24: ಅಮಿತ್ ಶಾ ವಿರುದ್ಧ ಕಮೆಂಟ್ ಮಾಡಿದ ವಿಧ್ಯಾರ್ಥಿಯನ್ನು ಸಸ್ಪೆಂಡ್ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ವಿವೇಕಾನಂದ ಲಾ ಕಾಲೇಜು ವಿದ್ಯಾರ್ಥಿ ಜಸ್ಟಿನ್ ಸೆಬಾಸ್ಟಿನ್ ಅಮಾನತುಗೊಂಡ ವಿದ್ಯಾರ್ಥಿಯಾಗಿದ್ದಾನೆ.
ಇತ್ತೀಚೆಗೆ ಪುತ್ತೂರಿನ ವಿವೇಕನಂದ ಕಾಲೇಜಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ಜಸ್ಟಿನ್ ಸೆಬಾಸ್ಟಿನ್ ತನ್ನ ಇನ್ಸ್ಟಾಗ್ರಾಂ ನಲ್ಲಿ ಬಂಡಲ್ ಶಾ ಎಂದು ಸ್ಟೇಟಸ್ ಹಾಕಿದ್ದ, ಈ ಹಿನ್ನಲೆಯಲ್ಲಿ ವಿಧ್ಯಾರ್ಥಿ ಜಸ್ಟಿನ್ ಸೆಬಾಸ್ಟಿನ್ ನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಸ್ಪೆಂಡ್ ಆದ ವಿಧ್ಯಾರ್ಥಿ ಜಸ್ಟಿನ್ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷ ವಿ.ಜೆ.ಸೆಬಾಸ್ಟಿನ್ ಎನ್ನುವವರ ಪುತ್ರ. ಆದರೆ ಕಾಲೇಜು ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದೆ.
You must be logged in to post a comment Login