Connect with us

FILM

3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್, ಕೃತಿ ಶೆಟ್ಟಿ ಯ ‘ಅಜಯಂತೆ ರಂದಂ ಮೋಷನಂ’

ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ ಅಭಿನಯದ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ ಸೆಟ್ಟೇರಿದೆ. ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದೆ.

ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಮೂರು ಯುಗಗಳನ್ನು ಸುತ್ತುವ ಕಥೆ ಚಿತ್ರದಲ್ಲಿದ್ದು ಟೊವಿನೋ ಥಾಮಸ್ ಮಣಿಯನ್, ಅಜಯನ್, ಕುಂಜಿಕೇಲು ಎಂಬ ಮೂರು ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ.

ಈ ಚಿತ್ರ ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ. ಚಿತ್ರದ ತಾಂತ್ರಿಕ ಬಳಗ ಅನುಭವಿ ತಂತಜ್ಞರಿಂದ ಕೂಡಿದ್ದು, ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ದೀಪು ನೈನನ್ ಥಾಮಸ್ ಸಂಗೀತ ನಿರ್ದೇಶನ, ಜೋಮನ್ ಟಿ ಜಾನ್ ಛಾಯಾಗ್ರಹಣ, ಶಮೀರ್ ಮೊಹಮ್ಮದ್ ಸಂಕಲನ ಚಿತ್ರಕ್ಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *