Connect with us

JYOTHISHYA

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಂದಿನ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262
 ಮೇಷ: ಕೆಲಸದಲ್ಲಿ ನಿಮ್ಮ ಬಗೆಗೆ ಮೆಚ್ಚುಗೆ ಭಾವನೆ ಬರಲಿದೆ. ದೊಡ್ಡ ಯೋಜನೆಗಾಗಿ ಆಸ್ಪದ ನೀಡಲಿದ್ದಾರೆ. ಸಮಾರಂಭಗಳ ಪೂರ್ಣ ತಯಾರಿ ನಿಮ್ಮ ವಿಚಾರಗಳಂತೆ ನಡೆಯಲು ಚಾಲನೆ ನೀಡುವರು. ಆತುರದ ವರ್ತನೆಗಳು ಸರಿಯಲ್ಲ. ಯೋಜನೆಗಳಲ್ಲಿ ನೀವು ಚೈತನ್ಯದಿಂದ ವರ್ತಿಸುವುದು ಅವಶ್ಯಕವಿದೆ. ಮನೆಯಲ್ಲಿ ಲಗುಬಗೆಯಿಂದ ವಸ್ತುಗಳು ಮರೆತುಹೋಗುವ ಅಥವಾ ಕಳೆದು ಹೋಗುವ ಸಾಧ್ಯತೆ ಇದೆ ಆದಷ್ಟು ಸಮಾಧಾನದಿಂದ ವರ್ತಿಸಿ. ಹಣಗಳಿಕೆಯಲ್ಲಿ ಉತ್ತಮ ಸ್ವರೂಪ ಪಡೆಯಲಿದೆ.
 ವೃಷಭ: ಕೆಟ್ಟ ಸ್ವಪ್ನ ಗಳಿಂದ ಮತ್ತು ಶಕುನ ಗಳಿಂದ ಮನಸ್ಸಿನಲ್ಲಿ ಅಶಾಂತಿ ಆಗಬಹುದು ಆದಷ್ಟು ಇಂದು ಶಕ್ತಿ ದೇವತೆಗಳಿಗೆ ಭೇಟಿ ನೀಡುವುದು ಒಳ್ಳೆಯದು. ಹಿರಿಯರು ಕೊಟ್ಟಿರುವ ವ್ಯವಹಾರ ಅಥವಾ ಬಳುವಳಿಗಳು ಮುಂದುವರಿಸಿ ಕಳೆದುಕೊಳ್ಳುವುದು ಬೇಡ. ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿ. ಕಟು ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಅವರ ಪ್ರತಿಯೊಂದು ಆಕಾಂಕ್ಷೆಗಳಿಗೆ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಕಾರ್ಯ ಮಾಡಿಕೊಡುವುದು ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.
ಮಿಥುನ:  ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ನಿಯಂತ್ರಣದಲ್ಲಿಡಿ. ನಂಬಿಕಸ್ಥ ಜನಗಳಿಂದ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರವಿರಲಿ. ವಾಹನ ಸವಾರಿಯಲ್ಲಿ ಜಾಗ್ರತೆ ಅತ್ಯವಶ್ಯಕ. ಚಂಚಲ ಮನಸ್ಸಿನಿಂದ ಕೆಲಸಗಳಲ್ಲಿ ಪರಿಪಕ್ವತೆ ಕಾಣಸಿಗದು, ಆದಷ್ಟು ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಸಾಲದ ಬಾಧೆಯಿಂದ ಅವಮಾನಕರ ಪ್ರಸಂಗ ಎದುರಿಸಬೇಕಾದ ಸಾಧ್ಯತೆ ಇದೆ ಆದಷ್ಟು ಹಣಕಾಸಿನ ವಿಷಯದಲ್ಲಿ ಉಳಿತಾಯದ ಯೋಜನೆ ಮಾಡಿಕೊಳ್ಳಿ. ಅನವಶ್ಯಕ ಕೆಲಸಗಳಲ್ಲಿ ಕಾಲಹರಣ ಮಾಡುವುದು ಬೇಡ.
ಕಟಕ
 ಕಟಕ: ವ್ಯವಹಾರಗಳಲ್ಲಿ ನಿಮ್ಮ ನಿರೀಕ್ಷೆಯಂತೆ ಅಭಿವೃದ್ಧಿ ಕಂಡುಬರಲಿದೆ. ಬಂಡವಾಳದ ಸಮಸ್ಯೆಗಳನ್ನು ಈ ದಿನ ಪರಿಹರಿಸುತ್ತೀರಿ. ದಾನ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಕಂಡು ಬರಲಿದೆ. ಲಾಭಾಂಶ ಮತ್ತು ಆದಾಯ ಹೆಚ್ಚಳ ಕಂಡುಬರುತ್ತದೆ ಇದರಿಂದ ಸಂತಸದ ವಾತಾವರಣ ಕಾಣಬಹುದು. ಸಂಗಾತಿಯೊಡನೆ ವಿಶೇಷ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಇರಾದೆ ನಿಮ್ಮಲ್ಲಿ ವ್ಯಕ್ತವಾಗಲಿದೆ.
ಸಿಂಹ: ಬಂಧುಮಿತ್ರರೊಡನೆ ಇರುವಂತಹ ಭಿನ್ನಾಭಿಪ್ರಾಯಗಳು ಈ ದಿನ ಸರಿಹೋಗಲಿದೆ. ಒಪ್ಪಿಕೊಂಡಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸುವ ಯೋಜನೆ ರೂಪಿಸಬೇಕಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ನೀವು ಕಡೆಗಣಿಸುವುದು ಬೇಡ. ತಪ್ಪುಗಳನ್ನು ಪುನಾರವರ್ತನೆ ಮಾಡುವುದು ಸರಿ ಕಾಣುವುದಿಲ್ಲ. ಗುರುಹಿರಿಯರ ಸಲಹೆಗಳನ್ನು ಪಡೆದು ಯೋಜನೆಗಳಲ್ಲಿ ಮುಂದುವರಿಯಿರಿ.
 ಕನ್ಯಾ : ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ತೀರ್ಮಾನ ಉತ್ತಮವಾಗಿ ಮೂಡಿ ಬರುತ್ತದೆ. ಈ ದಿನ ಅಂದುಕೊಂಡಿರುವ ಕೆಲಸಗಳಲ್ಲಿ ಗೆಲುವು ನಿಮ್ಮ ಪರವಾಗಿದೆ. ಕುಟುಂಬದಿಂದ ಶುಭ ಸುದ್ದಿಯನ್ನು ಆಲಿಸುವಿರಿ, ಇದು ನಿಮ್ಮಲ್ಲಿ ಸಂತಸ ತರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗುತ್ತಾ ಸಾಗಲಿದೆ. ಸಾಲಕೊಡುವ ವಿಚಾರಗಳಿಂದ ಆದಷ್ಟು ನೀವು ದೂರ ಇರುವುದು ಒಳ್ಳೆಯದು. ಮಕ್ಕಳೊಡನೆ ಕಾಲಕಳೆಯಲು ಪ್ರಯತ್ನಿಸಬೇಕಾಗಿದೆ
 ತುಲಾ : ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು.
 ವೃಶ್ಚಿಕ : ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. ಸಕಾರಾತ್ಮಕವಾಗಿ ಚಿಂತಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ.
ಧನಸ್ಸು: ಮಾನಸಿಕ ಕಿರಿಕಿರಿ ನಿಮಗೆ ಹೆಚ್ಚು ಆಗಬಹುದು. ಯೋಜನೆಗಳಲ್ಲಿ ವಿಳಂಬ ಧೋರಣೆ. ಮನೆ ಮತ್ತು ಉದ್ಯೋಗ ಎರಡನ್ನೂ ನಿರ್ವಹಿಸುವುದನ್ನು ಕಲಿಯಬೇಕಿದೆ. ನಿಮ್ಮ ಸಂಗಾತಿ ಪ್ರಣಯದಲ್ಲಿ ಆಸಕ್ತಿ ತೋರುವರು ಸಿಹಿಯಾದ ಪ್ರೇಮ ಬಾಂಧವ್ಯ ನಿಮ್ಮದಾಗುತ್ತದೆ.
 ಮಕರ: ಮಕ್ಕಳ ಚಟುವಟಿಕೆಯಲ್ಲಿ ನೀವು ಸಹ ಅವರೊಡನೆ ಕೂಡಿ ಕೊಳ್ಳಿ ಇದರಿಂದ ಮಕ್ಕಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುತ್ತದೆ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ. ಇಂದು ಚಿನ್ನಾಭರಣ ವಸ್ತುಗಳ ಖರೀದಿಗೆ ಆದ್ಯತೆ ನೀಡುವಿರಿ. ಅಡಮಾನ ಸಾಲವನ್ನು ತೀರಿಸುವ ಬಯಕೆ ಮೂಡಬಹುದು. ನಂಬಿಕಸ್ಥ ವ್ಯಕ್ತಿಗಳಿಂದ ನಿಮ್ಮ ಅವಕಾಶ ಬೇರೆಯವರ ಪಾಲಾಗುವ ಹಾಗೆ ಮಾಡಬಹುದು, ಇಂದು ನಿಮ್ಮ ಒಳ್ಳೆಯ ಗೆಳೆಯರು ಕೆಟ್ಟ ಸ್ನೇಹಿತರು ಯಾರು ಎಂಬುದು ಗೊತ್ತಾಗಲಿದೆ.
 ಕುಂಭ: ಸಾಮಾಜಿಕ ಮತ್ತು ರಾಜಕೀಯವಾಗಿ ಹೆಚ್ಚು ಬೆಳವಣಿಗೆ ಕಾಣಬಹುದು. ಇಂದು ಪ್ರಯಾಣವು ಸಹ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮವಾದ ದಿನವಿದು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಮುಖ್ಯ.
 ಮೀನ: ನಿಗದಿತ ಸಮಯಕ್ಕಿಂತ ಮೊದಲೇ ಕೆಲಸವನ್ನು ಮುಗಿಸುವ ಇಂದು ನೀವು ಬಹಳಷ್ಟು ಖುಷಿಯಾಗಿರುವಿರಿ. ಹಣಕಾಸಿನ ಸ್ಥಿತಿಯು ಆದಾಯ ಬಂದರೂ ಸಹ ಉಳಿತಾಯಕ್ಕೆ ಆದ್ಯತೆ ನೀಡಿ. ನಿಮ್ಮಲ್ಲಿನ ವ್ಯಕ್ತಿತ್ವ ಹಾಗೂ ನಗುವಿನ ಮಾತುಗಳಿಂದ ಎಲ್ಲವನ್ನು ಪ್ರೇಮಮಯವಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ.  
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
 

Facebook Comments

comments