LATEST NEWS
ದಕ್ಷಿಣಕನ್ನಡದಲ್ಲಿ 900 ಗಡಿ ದಾಟಿದ ಕೊರೊನಾ ಇಂದು 90 ಪ್ರಕರಣ ದಾಖಲು
ಮಂಗಳೂರು ಜುಲೈ 2 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 90 ಕೊರೊನಾ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 915ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ 15 ಪ್ರಕರಣ ಅಂತರಾಷ್ಟ್ರೀಯ 19 ಪ್ರಕರಣಗಳು ILI ಆಗಿದ್ದು, 8 SARI ಪ್ರಕರಣಗಳು, ಇನ್ನು 17 ಕೊರೊನಾ ಸೊಂಕಿತ ಪ್ರಕರಣಗಳ ಮೂಲ ಪತ್ತೆ ಹಚ್ಚಲಾಗುತ್ತಿದ್ದು, 31 ಮಂದಿಗೆ ಕೊರೊನಾ ಪ್ರಕರಣಗಳು ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಬಂದಿದೆ.
ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಬ್ಬರು ಕೊರೊನಾದಿಂದ 34 ಮಂದಿ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 436 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಸದ್ಯ 461 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 18 ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇಂದು ಎಂಆರ್ ಪಿಎಲ್ ನ ಹೊರಗಡೆ ಕರ್ತವ್ಯ ನಿರ್ವಹಿಸುತ್ತಿರುವ 7 ಸಿಐಎಸ್ ಎಫ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಎಂಆರ್ ಪಿಎಲ್ 7 ಸಿಐಎಸ್ ಎಫ್ ಸಿಬ್ಬಂದಿಯ ಸಂಪರ್ಕದಲ್ಲಿದ್ದ 45 ಮಂದಿ ಕ್ವಾರೆಂಟೈನ್ ಮಾಡಲಾಗಿದೆ. ಸಿಐಎಸ್ ಎಫ್ ಸಿಬ್ಬಂದಿ ಮನೆಯವರನ್ನು ಕ್ವಾರೆಂಟೈನ್ ನಲ್ಲಿಡಲಾಗಿದೆ.