LATEST NEWS
ಮಂಗಳೂರು ಇಂದು ಒಟ್ಟು 14 ಮಂದಿಗೆ ಕೊರೊನಾ ಸೊಂಕು

ಮಂಗಳೂರು ಇಂದು ಒಟ್ಟು 14 ಮಂದಿಗೆ ಕೊರೊನಾ ಸೊಂಕು
ಮಂಗಳೂರು ಮೇ.30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ 11 ವರ್ಷದ ಬಾಲಕಿ ಸಹಿತ 13 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ಬಂದು ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.
ಇನ್ನೊಂದು ಪ್ರಕರಣ ಪಿ – 947 ಮಂಗಳೂರಿನ ಸೋಮೇಶ್ವರ ನಿವಾಸಿ 38 ವರ್ಷದ ಮಹಿಳೆಯ ಸಂಪರ್ಕದಿಂದ 17 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಈ ಮಹಿಳೆ ಎರಡು ದಿನದ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇಂದಿನ 14 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 111 ಏರಿಕೆಯಾಗಿದೆ.
