Connect with us

    LATEST NEWS

    ಗುಡ್ ನ್ಯೂಸ್ ಉಡುಪಿಯಲ್ಲಿ ಒಂದೇ ದಿನ 45 ಮಂದಿ ಕೊರೊನಾದಿಂದ ಗುಣಮುಖ

    ಗುಡ್ ನ್ಯೂಸ್ ಉಡುಪಿಯಲ್ಲಿ ಒಂದೇ ದಿನ 45 ಮಂದಿ ಕೊರೊನಾದಿಂದ ಗುಣಮುಖ

    ಉಡುಪಿ, ಮೇ 30: ಮಹಾರಾಷ್ಟ್ರದ ಕೊರೊನಾ ಪ್ರಕರಣಗಳಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು ಸಂತಸದ ಸುದ್ದಿ ಬಂದಿದ್ದು, ಕೊರೋನ ಸೋಂಕಿನೊಂದಿಗೆ ಉಡುಪಿಯ ಟಿ.ಎಂ. ಎ.ಪೈ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 18 ಮಕ್ಕಳು ಸಹಿತ ಒಟ್ಟು 45 ಮಂದಿ ಸಂಪೂರ್ಣ ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೊರೋನ ಗೆದ್ದ ಒಂದು ವರ್ಷದ ಮಗು ಸಹಿತ ಒಟ್ಟು 18 ಮಕ್ಕಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಶೇಷ ಉಡುಗೊರೆ ಹಾಗೂ ಚಾಕಲೇಟ್ ವಿತರಿಸಿ, ಬೀಳ್ಕೊಟ್ಟರು. ಕೊರೊನಾ ನೆಗೆಟಿವ್ ಬಂದ ಒಂದು ವಾರದ ನಂತರ ಮನೆ ಕಳುಹಿಸಲು ರಾಜ್ಯ ಸರಕಾರ ನಿರ್ದೇಶನ ನೀಡಿದ ಹಿನ್ನಲೆ ಇಂದು 45 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

    ಇಂದು ಬಿಡುಗಡೆ ಹೊಂದಿದವರಲ್ಲಿ ಬಹುತೇಕ ಮಹಾರಾಷ್ಟ್ರ ಹಾಗೂ ದುಬೈಯಿಂದ ಆಗಮಿಸಿದವರು ಇದ್ದಾರೆ. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕೊರೋನ ಯುದ್ಧ ಗೆದ್ದ ಮಕ್ಕಳಿಗೆ ಶುಭ ಕೋರುವ ಉದ್ದೇಶದಿಂದ ಈ ರೀತಿ ಬೀಳ್ಕೋಡಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply