Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ 13 ಮಂದಿಗೆ ಕೊರೊನಾ ಸೊಂಕು

ಉಡುಪಿ ಜಿಲ್ಲೆಯಲ್ಲಿ 13 ಮಂದಿಗೆ ಕೊರೊನಾ ಸೊಂಕು

ಉಡುಪಿ ಮೇ.30: ಉಡುಪಿ ಜಿಲ್ಲೆಯಲ್ಲಿ ಮತ್ತೆ ಮಹಾರಾಷ್ಟ್ರ ಕಟಂಕ ಮುಂದುವರೆದಿದ್ದು, ಇಂದು ಮತ್ತೆ 13 ಮಂದಿಗೆ ಕೊರೋನಾ ಸೊಂಕು ದೃಢಪಟ್ಟಿದ್ದು, ಇದರೊಂದಿಗೆ ಉಡುಪಿ ಜಿಲ್ಲೆ ಕೊರೋನ ಪೀಡಿತರು ಸಂಖ್ಯೆ 177 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆ ಕೊರೊನಾ ಪ್ರಕರಣಗಲಲ್ಲಿ ಒಬ್ಬರು ಕ್ವಾರಂಟೈನ್ ಸೆಂಟರ್ ನಿಂದ ಮನೆಗೆ ತೆರಳಿದ್ದವರಿಗೆ ಸೊಂಕು ದೃಢಪಟ್ಟಿದೆ. ಈಗ ಸೊಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡುತ್ತಿದೆ.

ಇಂದು ಪತ್ತೆಯಾದ ಪ್ರಕರಣಗಲಲ್ಲಿ 12 ಮಂದಿ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದವರಾಗಿದ್ದು, ಒಬ್ಬರು ತೆಲಂಗಾಣದಿಂದ ಬಂದವರಲ್ಲಿ ಸೊಂಕು ಪತ್ತೆಯಾಗಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.