Connect with us

    KARNATAKA

    ಪ್ಲೈಓವರ್ ಪಿಲ್ಲರ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಬೆಂಕಿಗಾಹುತಿ -ಚಾಲಕ ಸಜೀವ ದಹನ

    ಮಂಡ್ಯ ಮಾರ್ಚ್ 17: ಪ್ಲೈಓವರ್ ನ ಪಿಲ್ಲರ್ ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಹೊತ್ತಿಕೊಂಡು ಉರಿದ ಘಟನೆ ಮದ್ದೂರಿನಲ್ಲಿ ನಡೆದಿದ್ದು, ಟಿಪ್ಪರ್ ಚಾಲಕ ಸಜೀವ ದಹನವಾಗಿದ್ದಾನೆ.


    ಮೃತ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ. ಮದ್ದೂರಿನ ಬೆಂಗಳೂರು- ಮೈಸೂರು ಹೆದ್ದಾರಿಯ ಎಲ್.ಐ.ಸಿ ಕಛೇರಿ ಮುಂಭಾಗ ಘಟನೆ ಸಂಭವವಿಸಿದೆ. ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ಟಿಪ್ಪರ್​ ತೆರಳುತ್ತಿದ್ದು,  ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪ್ಲೈ ಓವರ್ ಪಿಲ್ಲರ್​ಗೆ ಟಿಪ್ಪರ್ ಡಿಕ್ಕಿಯೊಡೆದಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾದ ಹಿನ್ನಲೆ ವಾಹನದೊಳಗೆ ಚಾಲಕ ಸಿಲುಕಿಕೊಂಡಿದ್ದಾನೆ. ವಾಹನದಿಂದ ಹೊರಬರಲಾಗದೇ ಚಾಲಕ ಸಜೀವ ದಹನವಾಗಿದ್ದಾನೆ.

    ಅಗ್ನಿಶಾಮಕ ಮತ್ತು ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ. ಘಟನೆ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply