Connect with us

LATEST NEWS

ಶಬರಿಮಲೆಯಲ್ಲಿ ಹುಲಿ ಪ್ರತ್ಯಕ್ಷ – ರಾತ್ರಿ ವೇಳೆ ಸಂಚಾರ ಸ್ಥಗಿತ

ಶಬರಿಮಲೆಯಲ್ಲಿ ಹುಲಿ ಪ್ರತ್ಯಕ್ಷ – ರಾತ್ರಿ ವೇಳೆ ಸಂಚಾರ ಸ್ಥಗಿತ

ಕೇರಳ ಡಿಸೆಂಬರ್ 11: ಶಬರಿ ಮಲೆ ಸಮೀಪ ಅಯ್ಯಪ್ಪ ಮಾಲೆಧಾರಿಗಳು ನಡೆದಾಡುವ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡ ಘಟನೆ ನಡೆದಿದೆ.

ಸನ್ನಿಧಾನದಿಂದ 1 ಕಿಲೋ ಮೀಟರ್ ದೂರದ ಪಾಂಡಿತ್ತವಳ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು , ಅಯ್ಯಪ್ಪ ವೃತಧಾರಿಗಳನ್ನು ಪೊಲೀಸ್ ರಕ್ಷಣೆಯಲ್ಲಿ ಗುಂಪಾಗಿ ಸಂಚರಿಸಲು ಆದೇಶ ನೀಡಿದ್ದಾರೆ. ಅಲ್ಲದೆ ರಾತ್ರಿಯ ವೇಳೆಯ ಸಂಚಾರವನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಹುಲಿ ಸಂಚಾರದ ಬಗ್ಗೆ ಪೊಲೀಸರು ಖಚಿತ ಪಡಿಸಿದ್ದಾರೆ.

ಈಗಾಗಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು , ದೇವರ ದರ್ಶನಕ್ಕಾಗಿ ಸುಮಾರು 18 ರಿಂದ 20 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸನ್ನಿವೇಶ ಎದುರಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *