Connect with us

    LATEST NEWS

    ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಜೀವ ಕಳೆದುಕೊಂಡ ಮೂವರು ಯುವಕರು

    ಪಶ್ಚಿಮ ಬಂಗಾಳ ಡಿಸೆಂಬರ್ 21: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಇದೀಗ ಜಾಸ್ತಿಯಾಗುತ್ತಿದ್ದು, ಇದೀಗ ರೀಲ್ಸ್ ಮಾಡುವಾಗ ರೈಲಿಗೆ ಸಿಲುಕಿ ಮೂವರು ಹದಿಹರೆಯದ ಯುವಕರು ಸಾವನಪ್ಪಿದ ಘಟನೆ ಮುರ್ಷಿದಾಬಾದ್‌ನ ಸುತಿ ಪೊಲೀಸ್ ಠಾಣೆಯ ಫೀಡರ್ ಕಾಲುವೆಯ ಅಹಿರಾನ್ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.


    ಈ ಘಟನೆಯಲ್ಲಿ ಮತ್ತೆ ಇಬ್ಬರು ಹದಿಹರೆಯದವರು ರೈಲಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ಜಂಗಿಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅಮೌನ್ ಶೇಖ್ (14), ರಫೀಕ್ ಶೇಖ್ (16) ಮತ್ತು ಸಮಿಯುಲ್ ಶೇಖ್ (17) ಎಂದು ಗುರುತಿಸಲಾಗಿದೆ.

    ಬುಧವಾರ ಮಧ್ಯಾಹ್ನ 3:30 ರ ಸುಮಾರಿಗೆ ಕೆಲವು ಯುವಕರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲು ಅಹಿರಾನ್ ಸೇತುವೆಯ ಮೇಲೆ “ರೀಲ್ಸ್” ಮಾಡುತ್ತಿದ್ದರು. ಆ ಸಮಯದಲ್ಲಿ ಜಂಗಿಪುರದಿಂದ ಫರಕ್ಕಾಗೆ ತೆರಳುತ್ತಿದ್ದ ರೈಲು ಆಗಮಿಸಿದ್ದು, ರೈಲು ಸೇತುವೆಯ ಮೇಲೆ ನುಗ್ಗಿದ್ದರಿಂದ ರೈಲು ಹಳಿಗಳ ಮೇಲೆ ನಿಂತಿದ್ದ ಹದಿಹರೆಯದವರಿಗೆ ಸೇತುವೆಯಿಂದ ದೂರ ಹೋಗಲು ಆಗದೆ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply