ಹೊಸ ವರ್ಷದ ವಿಷಾದದ ಘಟನೆ ಮೂರು ವಿಧ್ಯಾರ್ಥಿಗಳು ನೀರು ಪಾಲು

ಪುತ್ತೂರು ಜನವರಿ 1: ಹೊಸ ವರ್ಷದ ಸಂಭ್ರಮದ ಜೊತೆಗೆ ವಿಷಾದದ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬರ್ತ್ ಡೇ ಪಾರ್ಟಿ ಮಾಡಲೆಂದು ನದಿ ಕಿನಾರೆಗೆ ತೆರಳಿದ ಮೂರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಉಪ್ಪಿನಂಗಡಿ ಸಮೀಪದ ನಿವಾಸಿಗಳಾದ ಮಹಮ್ಮದ್ ಸುಹೈಲ್, ಸಹೀರ್, ಮತ್ತು ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.

ಮೃತ ವಿದ್ಯಾರ್ಥಿಗಳಲ್ಲಿ ನಿನ್ನಡ ಸುಹೈಲ್ ಎಂಬಾತನ ಹುಟ್ಟು ಹಬ್ಬವಾಗಿದ್ದು, ಇದನ್ನು ಆಚರಿಸುವ ಸಲುವಾಗಿ ಉಪ್ಪಿನಂಗಡಿ ಯ ನೇತ್ರಾವತಿ ನದಿ ಕಿನಾರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನದಿಗೆ ಇಳಿದ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ಇಂದು ಮುಂಜಾನೆ ಮೂವರ ಮೃತದೇಹ ಉಪ್ಪಿನಂಗಡಿ ಪತ್ತೆಯಾಗಿದೆ.ಪೋಲೀಸರ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದು, ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

3 Shares

Facebook Comments

comments