ಸುವರ್ಣ ನ್ಯೂಸ್ ಚಾನೆಲ್ ನ ಸಂಪಾದಕ ಅಜಿತ್ ಹನಮಕ್ಕನವರ್ ಮೇಲೆ FIR ದಾಖಲು

ಮಂಗಳೂರು ಡಿಸೆಂಬರ್ 31: ಸುವರ್ಣ ನ್ಯೂಸ್ ಚಾನೆಲ್ ನ ಸಂಪಾದಕ ಅಜಿತ್ ಹನಮಕ್ಕನವರ್ ಮೇಲೆ ಮಂಗಳೂರು ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.

ಇತ್ತೀಚೆಗೆ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಡಿಬೆಟ್ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ರವರನ್ನು ಹೀಯಾಳಿಸಿ ಮಾತಾಡಿದ್ದಾರೆ ಎಂದು ಆರೋಪಿಸಿ ಅಜಿತ್ ಹನಮಕ್ಕನವರ್ ವಿರುದ್ದ ರಾಜ್ಯಾದ್ಯಂತ ಈವರೆಗೆ 700 ಕ್ಕೂ ಅಧಿಕ ದೂರು ದಾಖಲಾಗಿದೆ.

ಮಂಗಳೂರಿನಲ್ಲೂ ಅಜಿತ್ ಅವರ ಮೇಲೆ ಮಂಗಳೂರು ಎಸ್ ಡಿಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಷರೀಫ್ ಪಾಂಡೇಶ್ವರದಲ್ಲಿ ದೂರು ದಾಖಲಾಗಿತ್ತು. ದೂರಿನ ಮೇಲೆ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಬಗ್ಗೆ ಏಳುನೂರಕ್ಕೂ ಅಧಿಕ ದೂರು ನೀಡಿದ್ದರೂ ಪ್ರಥಮವಾಗಿ ಎಫ್ಐಆರ್ ಮಂಗಳೂರಿನಲ್ಲಿ ದಾಖಲಾಗಿದೆ.

5 Shares

Facebook Comments

comments