LATEST NEWS
GPS ದೋಷ, ಬರೇಲಿಯಲ್ಲಿ ನದಿಗೆ ಉರುಳಿ ಬಿದ್ದ ಕಾರನಲ್ಲಿದ್ದ ಮೂವರ ದಾರುಣ ಅಂತ್ಯ..!
GPS ದೋಷದಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು ಕಾರು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ದಾರುಣ ಅಂತ್ಯ ಕಂಡಿದ್ದಾರೆ.
ಬರೇಲಿ: GPS ದೋಷದಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು ಕಾರು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ದಾರುಣ ಅಂತ್ಯ ಕಂಡಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿಂದ ವೇಗವಾಗಿ ಚಲಿಸುತ್ತಿದ್ದ ಕಾರು ನೇರವಾಗಿ ರಾಮಗಂಗಾ ನದಿಗೆ ಬಿದ್ದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಮೂವರು ಪ್ರಯಾಣಿಕರನ್ನು ಹೊತ್ತ ಕಾರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ಜಿಪಿಎಸ್ ನ್ಯಾವಿಗೇಷನ್ ಅನ್ನು ಅನುಸರಿಸುತ್ತಾ ಸಾಗಿದ ಕಾರ್ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿಂದ ನೇರವಾಗಿ ನದಿ ನೀರಿಗೆ ಬಿದ್ದಿದೆ. ಹಿಂದೆ ಈ ಪ್ರದೇಶದಲ್ಲಿ ಪ್ರವಾಹದ ಸಂದರ್ಭದಲ್ಲಿ ಸೇತುವೆಯ ಮುಂಭಾಗದ ಭಾಗವು ನದಿಗೆ ಕುಸಿದಿದೆ ಎಂಬುದನ್ನು ಜಿಪಿಎಸ್ ನ್ಯಾವಿಗೇಷನ್ ನವೀಕರಿಸದ ಕಾರಣ ಈ ಅವಘಡ ಸಂಭವಿಸಿದೆ. ಮೃತರು ಜಿಪಿಎಸ್ ಬಳಸಿ ದತ್ತಗಂಜ್‌ಗೆ ತೆರಳುತ್ತಿದ್ದರು.ಸೇತುವೆಯನ್ನು ದಾಟುವ ಅದು ತೋರಿಸಿದೆ. ಈ ವರ್ಷದ ಆರಂಭದಲ್ಲಿ ಪ್ರವಾಹದಿಂದ ಸೇತುವೆಯ ಮುಂಭಾಗದ ಭಾಗವು ಕುಸಿದಿರುವುದು ಅವರಿಗೆ ತಿಳಿದಿರಲಿಲ್ಲ.ಈ ಬದಲಾವಣೆಯನ್ನು GPS ನಲ್ಲಿ ನವೀಕರಿಸಲಾಗಿಲ್ಲ, ಇದರ ಪರಿಣಾಮವಾಗಿ ಚಾಲಕನು ದಾರಿತಪ್ಪಿದ್ದಾನೆ. ಜೊತೆಗೆ ಅಜಾಗೃತೆ ಮತ್ತು ಮಿತಿ ಮೀರಿದ ವೇಗ ಹತೋಟಿಗೆ ಬಾರದೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸುರಕ್ಷತಾ ಅಡೆತಡೆಗಳು ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಕೂಡ ಅಪಾಯಕ್ಕೆ ಕಾರಣವಾಗಿದೆ. ನದಿಯಿಂದ ವಾಹನ ಮತ್ತು ಮೃತದೇಹಗಳನ್ನು ಮೇಲಕ್ಕೆ ತರಲಾಗಿದೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.
ಇದಲ್ಲದೆ, ಘಟನೆಯ ಬಗ್ಗೆ ತಿಳಿದ ತಕ್ಷಣ, ಫರೀದ್‌ಪುರ, ಬರೇಲಿ ಮತ್ತು ಬದೌನ್‌ನ ದತಗಂಜ್ ಪೊಲೀಸ್ ಠಾಣೆಗಳ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದವು. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಲಯದ ಸರ್ಕಲ್ ಆಫೀಸರ್ ಅಶುತೋಷ್ ಶಿವಂ ತಿಳಿಸಿದ್ದಾರೆ.