Connect with us

    LATEST NEWS

    ಲೆಬನಾನ್ – ಪೇಜರ್ ಬಳಿಕ ಇದೀಗ ವಾಕಿಟಾಕಿ ಸ್ಪೋಟ – 9 ಸಾವು

    ಲೆಬನಾನ್ ಸೆಪ್ಟೆಂಬರ್ 18: ಹಿಜ್ಬುಲ್ಲಾಗಳ ಕೈಯಲ್ಲಿದ್ದ ಪೇಜರ್ ಸ್ಪೋಟದ ಬಳಿಕ ಇದೀಗ ಲೆನಾನ್ ನ ಬೈರುತ್ ಮತ್ತು ಇತರ ಪ್ರದೇಶಗಳಲ್ಲಿ ವಾಕಿ ಟಾಕೀಸ್, ಗೃಹ ಸೌರಶಕ್ತಿ ವ್ಯವಸ್ಥೆಗಳು ಸ್ಫೋಟಗೊಂಡಿದ್ದರಿಂದ 9 ಸಾವನಪ್ಪಿ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.


    ಲೆಬನಾನ್‌ನ ದಕ್ಷಿಣ ಬಂದರು ನಗರವಾದ ಸಿಡಾನ್‌ನಲ್ಲಿ ವಾಕಿ-ಟಾಕಿ ಸ್ಫೋಟಗೊಂಡಿದೆ. ಅಲ್ಲದೆ ಬೈರುತ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಕಿ-ಟಾಕಿಗಳು, ಸೌರಶಕ್ತಿ ವ್ಯವಸ್ಥೆಗಳು ಸ್ಫೋಟಗೊಂಡಿದ್ದರಿಂದ ಲೆಬನಾನ್‌ನಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ . ಮಂಗಳವಾರದ ಪೇಜರ್ ಬಾಂಬ್ ದಾಳಿಯಲ್ಲಿ 12 ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡ ಬಳಿಕ ತೀವ್ರ ಗೊಂದಲ ಮತ್ತು ಆಕ್ರೋಶದಿಂದ ಕುದಿಯುತ್ತಿರುವ ದೇಶವನ್ನು ಹೊಸ ಸ್ಫೋಟಗಳು ಮತ್ತಷ್ಟು ಕಂಗಾಲಾಗಿಸಿವೆ.

    ಘಟನಾ ಸ್ಥಳದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರ ಪ್ರಕಾರ, ಹಿಜ್ಬುಲ್ಲಾದ ಮೂವರು ಸದಸ್ಯರ ಅಂತಿಮ ಯಾತ್ರೆ ವೇಳೆ ಹಲವು ಸ್ಫೋಟಗಳು ಸಂಭವಿಸಿವೆ. ದಕ್ಷಿಣ ಕರಾವಳಿ ನಗರವಾದ ಸಿಡಾನ್‌ನಲ್ಲಿ ಕಾರು ಮತ್ತು ಮೊಬೈಲ್ ಫೋನ್ ಅಂಗಡಿಯೊಳಗೆ ಸಾಧನಗಳು ಸ್ಫೋಟಗೊಂಡ ಬಗ್ಗೆ ವರದಿಯಾಗಿದೆ. ಗುಂಪೊಂದು ಬಳಸುತ್ತಿದ್ದ ವಾಕಿ ಟಾಕಿಗಳು ಸ್ಫೋಟಗೊಂಡಿವೆ ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಬೈರೂತ್‌ನ ಹಲವು ಪ್ರದೇಶಗಳಲ್ಲಿ ಮತ್ತು ದಕ್ಷಿಣ ಲೆಬನಾನ್‌ನಲ್ಲಿನ ಮನೆಗಳಲ್ಲಿ ಸೌರಶಕ್ತಿ ಉಪಕರಣಗಳು ಸ್ಫೋಟಗೊಂಡಿವೆ ಎಂದು ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *