LATEST NEWS
ಕೇರಳದ ಈ ವೈರಲ್ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ…!!

ಕೇರಳ : ವಿಕಲಚೇತನ ವಿಧಾರ್ಥಿಯೊಬ್ಬನಿಗೆ ಇಬ್ಬರು ವಿಧ್ಯಾರ್ಥಿನಿಯರು ಹೆಗಲುಕೊಟ್ಟು ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಸಾಸ್ತಮಕೋಟಾದ ಡಿ ಬಿ ಕಾಲೇಜಿನ ಕ್ಯಾಂಪಸ್ನಲ್ಲಿ ವಿಕಲಚೇತನ ಯುವಕ ಅಲಿಫ್ ಮುಹಮ್ಮದ್ಗೆ ಇಬ್ಬರು ಸ್ನೇಹಿತರಾದ ಆರ್ಯ ಮತ್ತು ಅರ್ಚನಾ ಸಹಾಯ ಮಾಡುತ್ತಿರುವ ವಿಡಿಯೋ ಹಾಗೂ ಪೋಟೋ ಇಂಟರ್ ನೆಟ್ ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದು, ಸ್ನೇಹದ ಮಹತ್ವವನ್ನು ಸಾರುತ್ತಿದೆ.

ದೈಹಿಕ ಅಂಗವಿಕಲತೆ ಹೊಂದಿರುವ ಅಲಿಫ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಇದರ ಪೋಸ್ಟ್ ಮಾಡಿದ್ದು “ನಿಮ್ಮ ಅದ್ಭುತ ಸ್ನೇಹಿತರೊಂದಿಗೆ ನೀವು ನೀರು ಕುಡಿದಾಗ, ಅದು ಸಿಹಿಯಾಗಿರುತ್ತದೆ” ಎಂದು ಶೀರ್ಷಿಕೆ ನೀಡಿದ್ದಾರೆ.