Connect with us

    FILM

    ನಟ ಅನುಪಮ್ ಖೇರ್ ಮುಂಬೈ ಕಚೇರಿಗೆ ನುಗ್ಗಿದ ಕಳ್ಳರು

    ಮುಂಬೈ: ನಗರದ ವೀರ ದೇಸಾಯಿ ರಸ್ತೆಯಲ್ಲಿರುವ ಅನುಪಮ್ ಖೇರ್ ಅವರ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ ಘಟನೆ ನಡೆದಿದೆ.

    ಬೀಗ ಮುರಿದಿರುವ ಕಚೇರಿಯ ಮುಖ್ಯ ದ್ವಾರದ ವೀಡಿಯೋವನ್ನು ನಟ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ರಾತ್ರಿ ವೀರ ದೇಸಾಯಿ ರಸ್ತೆಯಲ್ಲಿರುವ ನನ್ನ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಲ್ಲದೇ ಕೆಲವೊಂದು ದಾಖಲೆಗಳನ್ನು ಕದ್ದಿದ್ದಾರೆ ಎಂದಿದ್ದಾರೆ.

    ಇಬ್ಬರು ಕಳ್ಳರು ಆಟೋದಲ್ಲಿ ಕುಳಿತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply