LATEST NEWS
ಬಿಜೆಪಿಯಲ್ಲಿ ಗೇಟ್ ಸಂಸ್ಕೃತಿ ಇಲ್ಲ – ರಘಪತಿ ಭಟ್
ಬಿಜೆಪಿಯಲ್ಲಿ ಗೇಟ್ ಸಂಸ್ಕೃತಿ ಇಲ್ಲ – ರಘಪತಿ ಭಟ್
ಉಡುಪಿ ಮಾರ್ಚ್ 23: ಬಿಜೆಪಿಯಲ್ಲಿ ಗೇಟ್ ಸಂಸ್ಕೃತಿ ಇಲ್ಲ. ಬಿಜೆಪಿ ಕಚೇರಿಗೆ ಗೇಟ್ ಇಲ್ಲ ನಮ್ಮಲ್ಲಿ ಗೇಟ್ ಹಾಕುವ ಸಂಸ್ಕೃತಿ ಇಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಸಚಿವ ಪ್ರಮೋದ್ ಮಧ್ವರಾಜ್ ಗೆ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಮೋದ್ ಮಧ್ವರಾಜ್ ಅವರ ಗೇಟ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಉಡುಪಿಯಲ್ಲಿ ಮೂವರು ಮಾಜಿ ಶಾಸಕರಿದ್ದಾರೆ ನಾನು, ಯು. ಆರ್ ಸಭಾಪತಿ, ಮನೋರಮಾ ಮಧ್ವರಾಜ್, ಈ ಮೂವರಲ್ಲಿ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಬಾರದೆಂದು ಯಾರು ಅಡ್ಡಗಾಲು ಹಾಕಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ ಎಂದ ಅವರು 2000 ಕೋಟಿ ಅನುದಾನ ತಂದವರಿಗೆ ಬೇರೆ ಪಕ್ಷ ಯಾಕೆ ಎಂದು ಪ್ರಶ್ನಿಸಿದರು. ಪ್ರಮೋಧ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಅಧ್ಯಕ್ಷರನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದರು. ಬಿಜೆಪಿಯನ್ನು ಉದ್ಧಾರ ಮಾಡಲು ಮಧ್ವರಾಜ್ ಬರುವುದು ಬೇಡ, ಅವರಿಗೆ ಲಾಭ ಆಗುವುದಾದ್ರೆ ಬಿಜೆಪಿಗೆ ಬರಲಿ ಎಂದು ಹೇಳಿದರು.
ಬಿಜೆಪಿ ಸೇರ್ಪಡೆ ಬಗ್ಗೆ ಮಧ್ವರಾಜ್ ಗೊಂದಲ ಸೃಷ್ಠಿಸುತ್ತಿದ್ದು , ಕಾಂಗ್ರೇಸ್ ಕಾರ್ಯಕರಲ್ಲಿ ನಾನು ಬಿಜೆಪಿ ಗೆ ಹೋಗ್ತೆನೆ ಎಂದು ಹೇಳುತ್ತಾರೆ. ಆದರೆ ಮಾಧ್ಯಮಗಳಲ್ಲಿ ಬೇರೆ ರೀತಿ ಹೇಳಿಕೆ ನೀಡಿ ಜನರನ್ನು ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.
You must be logged in to post a comment Login