Connect with us

LATEST NEWS

ನಟಿ ಸಂಯುಕ್ತಾ ಹೆಗಡೆ ವಿರುದ್ದ ಕಾಂಗ್ರೇಸ್ ನಾಯಕಿಯ ನೈತಿಕ ಪೊಲೀಸ್ ಗಿರಿ – ಶೋಭಾ ಕರಂದ್ಲಾಜೆ

ಬೆಂಗಳೂರು, ಸೆಪ್ಟೆಂಬರ್ 05 : ಪಾರ್ಕ್ ಒಂದರಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಸಂಯುಕ್ತಾ ಹೆಗಡೆ ಹಾಗೂ ಅವರ ಸ್ನೇಹಿತರ ಮೆಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದು, ನಮ್ಮ ಸಮಾಜದಲ್ಲಿ ಅಂತಹ ನೈತಿಕ ಪೊಲೀಸ್‌ಗಿರಿಗೆ ಸ್ಥಾನವಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಸಂಯುಕ್ತಾ ಹೆಗಡೆ ಅವರೊಂದಿಗೆ ಏನು ನಡೆದಿದೆ ಅದು ದುರದೃಷ್ಟಕರ. ನಮ್ಮ ಸಮಾಜದಲ್ಲಿ ಅಂತಹ ನೈತಿಕ ಪೊಲೀಸ್‌ಗಿರಿಗೆ ಸ್ಥಾನವಿಲ್ಲ ಎಂದು ಹೇಳಿರುವುದು ಮಾತ್ರವಲ್ಲದೇ ನಟಿ ಮತ್ತು ಆಕೆಯ ಸ್ನೇಹಿತರ ಮೇಲೆ ಹಲ್ಲೆ ಮಾಡಿ ನಿಂದಿಸಿದ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಈ ಘಟನೆಯ ಆರೋಪವನ್ನು ಕಾಂಗ್ರೆಸ್‌ ನಾಯಕರ ಮೇಲೆ ಹೊರಿಸಿರುವ ಬಿಜೆಪಿ ನಾಯಕಿ ಶೋಭಾ ಅವರು, ಕಾಂಗ್ರೆಸ್‌ ನಾಯಕರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ.


ಕಿರಿಕ್‌ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ತನ್ನ ಸ್ನೇಹಿತರೊಂದಿಗೆ ಬೆಂಗಳೂರಿನ ಉದ್ಯಾನವನದಲ್ಲಿ ಹುಲಾ ಹೂಪ್ ಪ್ರ್ಯಾಕ್ಟೀಸ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಪೋರ್ಟ್ಸ್‌ ಬಟ್ಟೆ ಧರಿಸಿದ್ದರು. ಈ ವೇಳೆ ಕೆಲ ಮಂದಿ ಸಂಯುಕ್ತಾ ಅಸಭ್ಯವಾಗಿ ಬಟ್ಟೆ ತೊಟ್ಟು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಸಂಯುಕ್ತಾ ವಿರುದ್ದ ಕಿಡಿಕಾರಿದ್ದರು.

ಈ ಸಂದರ್ಭ ಕಾಂಗ್ರೇಸ್ ನಾಯಕಿ ಕವಿತಾ ರೆಡ್ಡಿ ಎಂಬವರು ಸಂಯುಕ್ತಾ ಹೆಗಡೆ ಅವರ ಸ್ನೇಹಿತೆ ಮೇಲೆ ಹಲ್ಲೆಗೆ ಯತ್ನ ಕೂಡಾ ನಡೆಸಿದ್ದರು. ಇವೆಲ್ಲದರ ವಿಡಿಯೋವನ್ನು ನಟಿ ಸಂಯುಕ್ತಾ ಹೆಗಡೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ ಕ್ರಮಕ್ಕೆ ಆಗ್ರಹಿಸಿದ್ದಾರೆ.

Facebook Comments

comments