Connect with us

LATEST NEWS

ಉದ್ಯಾವರ ಜಯಲಕ್ಷ್ಮಿ ಬಟ್ಟೆ ಮಳಿಗೆಯಲ್ಲಿ 60 ಲಕ್ಷ ಹಣ ಕದ್ದ ಕಳ್ಳರು…!!

ಉಡುಪಿ ಮಾರ್ಚ್ 16: ಕರಾವಳಿಯ ಖ್ಯಾತ ವಸ್ತ್ರಮಳಿಗೆ ಉದ್ಯಾವರದಲ್ಲಿರುವ ಜಯಲಕ್ಷಿ ಮಳಿಗೆಗೆ ಕಳ್ಳರು ನುಗ್ಗಿ 60 ಲಕ್ಷ ರೂಪಾಯಿ ನಗದು ಕಳವು ಮಾಡಿದ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾರ್ಚ್ 15 ರಂದು ಮುಂಜಾನೆ ಉದ್ಯಾವರ ಜಯಲಕ್ಷ್ಮೀ ಬಟ್ಟೆ ಅಂಗಡಿಯ ನೆಲಮಹಡಿಯ ವಾಶ್‌ರೂಂಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನ್‌ ಕಿತ್ತು ಅದರ ಮೂಲಕ ಬಟ್ಟೆ ಅಂಗಡಿಗೆ ಕಳ್ಳರು ಪ್ರವೇಶಿಸಿದ್ದಾರೆ.


ಅಲ್ಲಿಂದ ಅಂಗಡಿಯ ನೆಲಮಹಡಿಯ ಕ್ಯಾಶ್ ಕೌಂಟರ್‌ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡು ಬಳಿಕ ಮಹಡಿಯ ಕಛೇರಿಗೆ ಬಂದು ಅಲ್ಲಿನ ಪಿಂಗರ್ ಪ್ರಿಂಟ್ ಇರುವ ಸೇಫ್ ಲಾಕರ್‌ನ ಕೀಯನ್ನು ತಂದು ಕಛೇರಿಯ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ ಹಣದ ಸೇಫ್ ಲಾಕರ್ ಕೀ ತೆಗೆದು ಅದರ ಮೂಲಕ ಹಣವಿಟ್ಟಿದ್ದ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ 60 ಲಕ್ಷ ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

You must be logged in to post a comment Login

Leave a Reply