Connect with us

DAKSHINA KANNADA

ಬೆಳ್ತಂಗಡಿಯ ವಿಷ್ಣುಮೂರ್ತಿ ದೇಗುಲದಲ್ಲಿ ಕಳವು-ಪೊಲೀಸರಿಂದ ತನಿಖೆ

ಬೆಳ್ತಂಗಡಿ, ಆಗಸ್ಟ್ 25: ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿಕೊಂಡು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನಲ್ಲಿ ನಡೆದಿದೆ.

ಅಲ್ಲಿನ ಸಿ ಸಿ. ಟಿ ವಿ. ಡಿವಿಆರ್, ಮೋನಿಟರ್ ಸಮೇತ ಹಿಡಿದುಕೊಂಡು ಹೋಗಿದ್ದಾರೆ, ದೇವಾಲಯದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು ಸಂಶಯ ಬಂದು ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ಕಳ್ಳರು ನುಗ್ಗಿದ್ದು ಖಚಿತವಾಗಿದೆ.

ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಆರಕ್ಷಕ ಠಾಣೆಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದಾರೆ.ಬೆರಳಚ್ಚು ತಜ್ಞರು, ಶ್ವಾನದಳ ಬಂದು ಪರಿಶೀಲಿಸಿದೆ, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಠಾಣಾಧಿಕಾರಿ ಸೌಮ್ಯ ಕೆಲವು ಮುಂಜಾಗ್ರತೆಯ ಮಾಹಿತಿ ನೀಡಿ, ಈ ತನಿಖೆಯನ್ನು ಅತ್ಯಂತ ವೇಗವಾಗಿ ಬೇಧಿಸುವುದಾಗಿ ಭರವಸೆ ನೀಡಿದರು.

ಈ ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದು ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತು ಗಳನ್ನು ದೋಚಲಾಗಿತ್ತು. ಆದರೆ ಅದರ ಬಗ್ಗೆ ಈ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಸಿಕ್ಕಿಲ್ಲ. ಅಲ್ಲದೆ ಇತ್ತೀಚೆಗೆ ಸ್ಥಳೀಯ ಪ್ರದೇಶದ ಕೆಲವು ದೇವಸ್ಥಾನದಲ್ಲಿ ಕಳೆದ ತಿಂಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

Share Information
Advertisement
Click to comment

You must be logged in to post a comment Login

Leave a Reply