Connect with us

BANTWAL

ಮನೆಯವರು ಇರುವಾಗಲೇ ಕಳ್ಳತನ ಮಾಡಿದ ಚಾಲಾಕಿ ಕಳ್ಳ ಅರೆಸ್ಟ್

ಬಂಟ್ವಾಳ: ಮನೆಯ ಸದಸ್ಯರು ಮನೆಯಲ್ಲಿ ಇರುವಾಗಲೇ ಹಿಂಬಾಗಿಲಿನಿಂದ ನುಗ್ಗಿ ಕಳ್ಳತನ ಮಾಡಿದ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಮಹಮ್ಮದ್‌ ಕೆ ಯು ಎಂದು ಗುರುತಿಸಲಾಗಿದೆ.


ಮಾರ್ಚ್ ತಿಂಗಳಲ್ಲಿ ಹಂಝ ಮುರ ಉಮ್ಮರ್‌ ಎಂಬವರ ಮನೆಯಲ್ಲಿ ಆರೋಪಿ ರಾತ್ರಿ 11ರ ಸಮಯ ಮನೆಯವರು ಇರುವಾಗಲೇ ಹಿಂದಿನ ಬಾಗಿಲಿನಿಂದ ನುಗ್ಗಿ ಅಂದಾಜು 4 ವಕ್ಷ ಬೆಲೆ ಬಾಳುವ 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ಹಂಝ ಮುರ ಉಮ್ಮರ್‌ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿ ತನಿಖೆಯ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟ ಮಾಡಿದ ಬಗ್ಗೆ ತಿಳಿದು ಬಂದಿದ್ದು ಅದರಂತೆ ಕಳವು ಮಾಲನ್ನು ಕಾಸರಗೂಡಿನ ಜ್ಯುವ್ಯೆಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 3,71,600/-ರೂಪಾಯಿ ಆಗಬಹುದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *