BELTHANGADI
ಬಿಜೆಪಿಯವರಿಗೆ ಆಪರೇಷನ್‌ಗೆ ಡಾಕ್ಟರ್‌ಗಳನ್ನು ಹುಡುಕಿದ್ರು ಥಿಯೇಟರ್‌ಗಳು ಸಿಕ್ಕಿಲ್ಲ : ಸಚಿವ ರೇವಣ್ಣ ವ್ಯಂಗ್ಯ
ಬಿಜೆಪಿಯವರಿಗೆ ಆಪರೇಷನ್‌ಗೆ ಡಾಕ್ಟರ್‌ಗಳನ್ನು ಹುಡುಕಿದ್ರು ಥಿಯೇಟರ್‌ಗಳು ಸಿಕ್ಕಿಲ್ಲ : ಸಚಿವ ರೇವಣ್ಣ ವ್ಯಂಗ್ಯ
ಪುತ್ತೂರು, ಫೆಬ್ರವರಿ 08 : ಸಿಎಂ ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ರೈತರು ಬಡವರು ಮಧ್ಯಮ ವರ್ಗಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.ಬಜೆಟ್‌ನಲ್ಲಿ ಕರಾವಳಿಯನ್ನೂ ಕಡೆಗಣಿಸದೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಲೋಕೊಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಲ್ಲಿ ಮಹಾ ಮಸ್ತಕಾಭಿಷೇಕದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಧು- ಸಂತರ ಸಮ್ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾರ್ಚ್ ನಲ್ಲಿ ಸಾಲಮನ್ನಾದ ಹಣ ಬಿಡುಗಡೆಯಾಗುತ್ತದೆ. ಹಾಸನ, ಬೆಳಗಾಂ ಮತ್ತು ಬಾಗಲಕೋಟೆಯಲ್ಲಿ ಸಾಲಮನ್ನದ ಹಣ ರಿಲೀಸ್ ಆಗುತ್ತೆ .42ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರಿಗೆ ಋಣ ಮುಕ್ತ ಪತ್ರ ನೀಡುತ್ತೇವೆ ಎಂದು ಹೇಳಿದ ಅವರು ಮೀನುಗಾರರಿಗೆ ಹಲವಾರು ಕಾರ್ಯಕ್ರಮಗಳಳನ್ನು ಮುಖ್ಯಮಂತ್ರಿಗಳು ತಂದಿದ್ದಾರೆ ಎಂದರು.
ಬಿಜೆಪಿಯ ಆಪರೇಷನ್ ಕಮಲದ ವಿಚಾರ ಪ್ರಸ್ತಾಪಿಸಿದ ಅವರು ಕಳೆದ ಹತ್ತು ದಿನಗಳಳ್ಲಿ ಸಾಕಷ್ಟು ಒದ್ದಾಡಿದ್ದಾರೆ. ಬಿಜೆಪಿಯವರಿಗೆ ಆಪರೇಷನ್ ಥಿಯೆಟರ್ ಸಿಕ್ಕಿಲ್ಲ. ಆಪರೇಷನ್ ಗೆ ಡಾಕ್ಟರ್ ಗಳನ್ನು ಹುಡುಕಿದ್ರು ಆದರೆ ಥಿಯೇಟರ್ ಗಳು ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದ ಅವರು ಈಗ ಆಪರೇಷನ್ ಆಗದೆ ಪರದಾಡುತ್ತಿದ್ದಾರೆ ಎಂದರು. ಬಿಸಿ ಪಾಟೀಲ್ ಮುಂಬೈ ಗೆ ಹೋದ್ರೆ ಏನಾಗಲ್ಲ, ಎಂಟನೇ ತಾರೀಖು ಬಜೆಟ್ ಅನುಮೋದನೆ ಆಗುತ್ತೆ.ಕುಮಾರಸ್ವಾಮಿ ಸರ್ಕಾರ ಕ್ಕೆ ಏನಾಗಲ್ಲ. ದೇವರ ಅನುಗ್ರಹ ಸರ್ಕಾರದ ಮೇಲಿದೆ ಎಂದ ರೇವಣ್ಣ ಅವರು ಕುಮಾರಸ್ವಾಮಿಯನ್ನು ಅಲುಗಾಡಿಸೋಕೆ ಯಾರಿಗೂ ಆಗಲ್ಲ ಎಂದ ಅವರು ಇವರ ಬಗ್ಗೆ ನನ್ನ ಬಾಯಲ್ಲಿ ಏನು ಹೇಳೋಕೆ ಆಗಲ್ಲ.ದೇವರ ದಯ ಇರೋವರೆಗೆ ಸರ್ಕಾರ ಸುಭದ್ರ ವಾಗುತ್ತದೆ ಎಂದರು. ಲೋಕಸಭೆಯಲ್ಲಿ ಸಾಲಮನ್ನಾ ಬಗ್ಗೆ ಮೋದಿ ಪ್ರಸ್ತಾಪ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ರೈತರ ಸಾಲಮನ್ನಾ ಬಗ್ಗೆ ಮೋದಿಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಗೆ ರಾಜ್ಯದ ವಿಚಾರ ಗೊತ್ತಿಲ್ಲ. ರಾಜ್ಯದ ವಿಚಾರ ತಿಳಿದು ಲೋಕಸಭೆಯಲ್ಲಿ ಹೇಳಲಿ ಎಂದು ನುಡಿದರು.