ಬರೋಬ್ಬರಿ 157 ವರ್ಷಗಳ ನಂತರ ನಡೆದ ಈ ನೇಮೋತ್ಸವ

ಬಂಟ್ವಾಳ ಫೆಬ್ರವರಿ 8 : ಶತಮಾನಗಳ ಇತಿಹಾಸ ಹೊಂದಿರುವ ವಿಟ್ಲ ಶ್ರೀ ಪಾರ್ಥಂಪಾಡಿ ದೈವಸ್ಥಾನದ ಜೀರ್ಣೋದ್ದಾರ ಪೂರ್ಣಗೊಂಡು, ದೈವ ಸ್ಥಾನದ ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ಮತ್ತು ಮೈಮೆ ಕಾರ್ಯಕ್ರಮ ನಡೆಯಿತು.

ವಿಟ್ಲ ಪೇಟೆಯಿಂದ ಸ್ವಲ್ಪ ದೂರದಲ್ಲಿ ವಿಟ್ಲ ಕಾಸರಗೋಡು ರಸ್ತೆಯ ಅಂಚಿನಲ್ಲಿರುವ ವಿಟ್ಲ ಅರಮನೆಯ ಎದುರು ಮಠದ ಹಿತ್ಲು ಎಂಬಲ್ಲಿ ಈ ದೈವಸ್ಥಾನ ಇದ್ದು, ಇದು ವಿಟ್ಲ ಅರಸು ಅನುವಂಶಿಕ ಆಡಳಿತಕ್ಕೊಳಪಟ್ಟ ದೈವಸ್ಥಾನವಾಗಿದೆ. ಪಾರ್ಥಂಪಾಡಿ ಶ್ರೀ ಜಠಾಧಾರಿ ಪಾರ್ಥಂಪಾಡಿ ಚಾವಡಿ ಪಟ್ಟದ ದೈವವೆನಿಸಿದೆ.

ಸಂಪೂರ್ಣ ಶಿಥಿಲಾವಸ್ಥೆಗೆ ತಲಪಿದ್ದ ಶ್ರೀ ಜಠಧಾರಿ ದೈವಸ್ಥಾನವನ್ನು ಊರವರು ಸೇರಿ ಜೀರ್ಣೋದ್ದಾರ ಮಾಡಿದ್ದು, ಇದೀಗ ಸುಂದರವಾದ ದೈವಸ್ಥಾನ, ನಾಗಸಾನಿಧ್ಯ, ಗುಳಿಗನ ಕಟ್ಟೆ ಪುನರ್ ನಿರ್ಮಾಣಗೊಂಡಿದೆ.

ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಪೂರ್ಣಗೊಂಡ ಹಿನ್ನಲೆಯಲ್ಲಿ ದೈವಸ್ಥಾನದಲ್ಲಿ ದೈವ ಸ್ಥಾನದ ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ಮತ್ತು ಮೈಮೆ ಕಾರ್ಯಕ್ರಮ ನಡೆಯಿತು.

ಸುಮಾರು 157 ವರ್ಷಗಳ ಹಿಂದೆ ಬಾಡೂರು ಕೊಟೇಲು ಚಾವಡಿಯಿಂದ ಭಂಡಾರ ಬಂದು ಬಾಕಿಮಾರು ಗದ್ದೆ ಸಮೀಪದ (ಮೈಮೆದ ಕಂಡ) ಮಹಿಮೆಯ ಗದ್ದೆಯಲ್ಲಿ ಜಠಾಧಾರಿ ದೈವದ ಮಹಿಮೆ ಜರುಗಿತ್ತು. ಆದರೆ ಆ ನೇಮೋತ್ಸವ ನೋಡಿದ ಪೀಳಿಗೆಯವರು ಈಗ ಯಾರು ಇಲ್ಲ. ಈಗ ಮತ್ತೆ ದೈವಸ್ಥಾನದ ಜೀರ್ಣೋದ್ದಾರ ನಡೆಸಿದ ನಂತರ ಸುಮಾರು ಒಂದೂವರೆ ಶತಮಾನಗಳ ನಂತರ ಜಠಾಧಾರಿ ಮೈಮೆ ದೈವಸ್ಥಾನದಲ್ಲಿ ಮೈಮೆಯ ಗದ್ದೆಯಲ್ಲಿ ಜಠಾಧಾರಿ ದೈವದ ಮಹಿಮೆ ನೇಮೋತ್ಸವ ಕಾರ್ಯಕ್ರಮ ನಡೆಯಿತು.

VIDEO

Facebook Comments

comments