Connect with us

  KARNATAKA

  ಅಸ್ವಸ್ಥ ತಂದೆಯನ್ನ ಆಸ್ಪತ್ರೆಗೆ ಕರೆದೊಯ್ದ ಮಗನೇ ಕುಸಿದು ಬಿದ್ದು ಮೃತ್ಯು.!

  ತ್ರಿಕರಿಪುರ (ಕೇರಳ) : ಅಸ್ವಸ್ಥಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ  ಮಗನೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳ ರಾಜ್ಯದ ಕಾಸರಗೋಡು ಸಮೀಪದ ತ್ರಿಕರಿಪುರದಲ್ಲಿ ನಡೆದಿದೆ.

   

  ವಲಿಯಪರಂ ಹನ್ನೆರಡರ ಎಂ.ಕೆ.ಅಹ್ಮದ್ ಮತ್ತು ನೂರ್ಜಹಾನ್ ದಂಪತಿಯ ಪುತ್ರ ಅಲ್ತ್ವಾಫ್ (26) ಮೃತಪಟ್ಟ ಯುವಕನಾಗಿದ್ದಾನೆ . ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಅಲ್ತಾಫ್  ಕರೆದೊಯ್ದಿದ್ದ.  ಅಲ್ಲಿಯೇ ಅಲ್ತಾಫ್ ಕುಸಿದು ಬಿದ್ದಿದ್ದಾನೆ.  ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಯಿತಾದರೂ ಅಲ್ತಾಫ್  ಪ್ರಾಣ ಉಳಿಸಲಾಗಲಿಲ್ಲ. ಮೃತದೇಹವನ್ನು ಮನೆಗೆ ತಂದು ಬಳಿಕ ವಲಿಯಪರಂ ಜುಮಾ ಮಸೀದಿ ಕಬರಸ್ಥನದಲ್ಲಿ ದಫನ ನಡೆಸಲಾಯಿತು. ವಿದೇಶದಲ್ಲಿದ್ದ ಅಲ್ತ್ವಾಫ್ ತನ್ನ ಮದುವೆಗೆ ಸಂಬಂಧಿಸಿದ ಕಾರಣಗಳಿಗಾಗಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ. ದಂಪತಿಯ ನಾಲ್ವರು ಮಕ್ಕಳಲ್ಲಿ ಒಬ್ಬನೇ ಗಂಡು ಮಗು ಆಗಿದ್ದ ಅಲ್ತ್ವಾಫ್  ಮನೆಗೆ ವಿದೇಶದಲ್ಲಿ ನೌಕರಿ ಮಾಡಿಕೊಂಡು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಆದ್ರೆ ಇದೀಗ ಏಕಾಏಕಿ ಹೃದಯಾಘಾತಕ್ಕೆ ಇಹಲೋಕ ತ್ಯಜಿಸಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

  Share Information
  Advertisement
  Click to comment

  You must be logged in to post a comment Login

  Leave a Reply