FILM
ಅಪಾರ ಸಾವು ನೋವು,ಕಷ್ಟನಷ್ಟಗಳಿಂದ ಕಂಗೆಟ್ಟ ಸ್ಯಾಂಡಲ್ ವುಡ್ ಉಳಿವಿಗೆ ಆ.13,14ರಂದು ಹೋಮಹವನ..!
ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಅಪಾರ ಸಾವು ನೋವು,ಕಷ್ಟನಷ್ಟಗಳಿಂದ ಕಂಗೆಟ್ಟ ಸ್ಯಾಂಡಲ್ ವುಡ್ ಉಳಿವಿಗೆ ಆ.13,14ರಂದು ಹೋಮಹವನ ಮಾಡಲು ಕನ್ನಡ ಚಲನಚಿತ್ರ ಕಲಾವಿದರ ಸಂಘ ತೀರ್ಮಾನಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಹಲವು ಗಂಭೀರ ಸಮಸ್ಯೆಗಳಿಂದ ಕನ್ನಡ ಚಿತ್ರ ರಂಗ ನಲುಗುತ್ತಿದೆ. ಕೋವಿಡ್ ಸಾಂಕ್ರಾಮಿಕ ಬಳಿಕ ಹಲವು ಕಲಾವಿದರು ಪ್ರಾಣಕಳಕೊಂಡಿದ್ದಾರೆ, ಕೆಲವರು ಜೈಲು ಪಾಲಾಗಿದ್ದಾರೆ. ಕನ್ನಡ ಚಿತ್ರರಂಗ ಅಪಾರ ನಷ್ಟ ಅನುಭವಿಸುತ್ತಿದ್ದು ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಉಳಿವಿಗೆ ದೇವರ ಮೊರೆ ಹೋಗಲು ಕನ್ನಡ ಕಲಾವಿದರ ಸಂಘ ತೀರ್ಮಾನಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ರಾಕ್ ಲೈನ್ ವೆಂಕಟೇಶ್ , ಹಿರಿಯ ನಟ ದೊಡ್ಡಣ್ಣ ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಕೊರೊನಾ ಬಳಿಕ ಸಾಕಷ್ಟು ಸಾವು ನೋವು ಸಂಭವಿಸಿವೆ. ಚಿತ್ರರಂಗದಲ್ಲೂ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಪೂಜೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ಆಮಂತ್ರಣ ಕೊಡ್ತೀವಿ. ಆದರೆ ಇಲ್ಲಿ ಯಾರಿಗೂ ಇನ್ವಿಟೇಷನ್ ಕೊಡಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದು ಸಲ್ಯೂಷನ್ ಬೇಕಾಗಿದೆ. ನಾವು ಅನೇಕ ಸಲ ಜನರ ಬಳಿ ಮನವಿ ಮಾಡಿದ್ದೇವೆ. ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗ್ತಿದ್ದವು, ಅದು ಕಡಿಮೆ ಇತ್ತು. ಆದರೆ ಇವತ್ತು ಸುನಾಮಿ ರೀತಿ ಎಲ್ಲ ಚಿತ್ರಗಳು ಬರ್ತಾ ಇವೆ. ಎಲ್ಲ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡ್ತಿದ್ದಾರೆ. ಇದು ವ್ಯಾಪಾರ. ನಾನು ಅದರ ಬಗ್ಗೆ ಮಾತನಾಡೊಲ್ಲ. ಆದರೆ ಅದರ ಪರಿಣಾಮದಿಂದ ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗ್ತಾ ಇದೆ. ಅದನ್ನು ಉಳಿಸಿಕೊಳ್ಳೋಕೆ ಈ ಪೂಜೆ ನಡೆಸುತ್ತಿದ್ದೇವೆ ಎಂದರು. ನಟ ದೊಡ್ಡಣ್ಣ ಮಾತನಾಡಿ ನಾನು ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾಗ ಪೂಜೆ ಪುನಸ್ಕಾರದ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದೆ. ಆದರೀಗ ವಯಸ್ಸು 75 ಆದ್ಮೇಲೆ ಗೊತ್ತಾಗ್ತಿದೆ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇನೆ .ಆಗಸ್ಟ್ 13,14ರಂದು ಕನ್ನಡ ಚಿತ್ರರಂಗದ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಚಿತ್ರರಂಗದ ಉಳಿವಿಗಾಗಿ, ಎಲ್ಲ ಕಲಾವಿದರ ಒಳಿತಿಗಾಗಿ ಪೂಜೆ ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ. ಅಂದಿನ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಮಂತ್ರಿಸಿದ್ದೇವೆ. ಅನ್ನದಾತರು, ನಿರ್ಮಾಪಕ, ನಿರ್ದೇಶಕರು, ಛಾಯಾಗ್ರಾಹಕರು, ಪ್ರೊಡಕ್ಷನ್ ಬಾಯ್ಸ್ ಮೇಕಪ್ ಆರ್ಟಿಸ್ಟ್ ಆರ್ಟ್ ಫಿಲಂ, ಪೋಷಕರ ಕಲಾವಿದರ ಸಂಘ, ಫಿಲ್ಮ್ ಚೇಂಬರ್ಸ್ ಅವರ ಕರೆದಿದ್ದೇವೆ ಎಂದರು..