KARNATAKA
ದಾರಿಯಲ್ಲಿ ಸಿಕ್ಕ ಯುವಕನನ್ನು ವಿಚಾರಿಸಿದಾಗ ಬೆಚ್ಚಿಬಿದ್ದ ಪೊಲೀಸರು, ತನಿಖೆಯಿಂದ ಹೊರಬಿತ್ತು ದರೋಡೆಕರನ ಕರಾಮತ್ತು…!
ಕಾಸರಗೋಡು: ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಓಡಾಡುತ್ತಿದ್ದ ಯುವಕನ ಸಿಕ್ಕದ್ದು ಸಂಶಯದ ಮೇರೆಗೆ ವಿಚಾರಿಸಿದಾಗ ದರೋಡೆಕೋರನ ಅಸಲಿಯತ್ತು ಹೊರ ಬಿದ್ದಿದೆ.
ಮಂಜೇಶ್ವರ ಪೊಲೀಸರು ಇನ್ಸ್ ಪೆಕ್ಟರ್ ಟಾಲ್ಸನ್ ಜೋಸೆಫ್ ಮತ್ತು ಎಸ್‌ಐ ನಿಖಿಲ್ ನೇತೃತ್ವದಲ್ಲಿ ರಾತ್ರಿ ಸಿಕ್ಕ ಈ ಯುವಕನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಒರ್ವ ದರೋಡೆಕೋರನೆಂದು ತಿಳಿದು ಬಂದಿದೆ. ಕರ್ನಾಟಕದ ಉಪ್ಪಿನಂಗಡಿ ನಿವಾಸಿ ಗೋಲಿ ಹನೀಫ (34) ಯಾನೆ ಮೊಹಮ್ಮದ್ ಹನೀಫನೇ ಬಂಧಿತ ಆರೋಪಿಯಾಗಿದ್ದು ವಿಚಾರಣೆ ನಡೆಸಿದಾಗ ತಿಂಗಳ ಹಿಂದೆ ನಾಚಿಲಪದವು ಸುಂಗಟಕಟ್ಟಾ ಎಂಬಲ್ಲಿ ಬೀಗ ಹಾಕಿದ ಮನೆಯಲ್ಲಿ ದರೋಡೆ ಮಾಡಿರುವುದಾಗಿ ಮಹಮ್ಮದ್ ಹನೀಫ್ ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲೂ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
You must be logged in to post a comment Login