KARNATAKA
ಮೈಸೂರಿನಲ್ಲಿ ವಿವಾದಿತ ‘ಮಹಿಷ ದಸರಾ’ಕ್ಕೆ ಅನುಮತಿ ನೀಡಿದ ಪೊಲೀಸ್ ಇಲಾಖೆ..!
ರಾಜ್ಯಾದ್ಯಾಂತ ಭಾರಿ ಭಾರೀ ಚರ್ಚೆಗೆ ಗ್ರಾಸವಾದ ವಿವಾದಿತ ಮಹಿಷ ದಸರಾದ (Mahisha Dasara) ಕ್ಕೆ ಮೈಸೂರು ನಗರ ಪೊಲೀಸ್ ಇಲಾಖೆ ಶರತ್ತು ಬದ್ದ ಅನುಮತಿ ನೀಡಿದೆ.
ಮೈಸೂರು: ರಾಜ್ಯಾದ್ಯಾಂತ ಭಾರಿ ಭಾರೀ ಚರ್ಚೆಗೆ ಗ್ರಾಸವಾದ ವಿವಾದಿತ ಮಹಿಷ ದಸರಾದ (Mahisha Dasara) ಕ್ಕೆ ಮೈಸೂರು ನಗರ ಪೊಲೀಸ್ ಇಲಾಖೆ ಶರತ್ತು ಬದ್ದ ಅನುಮತಿ ನೀಡಿದೆ.
ಆದ್ರೆ ಕಾರ್ಯಕ್ರಮ ವೇದಿಕೆಗೆ ಮಾತ್ರ ಸೀಮಿತವಾಗಬೇಕು ಮತ್ತು ಕಾರ್ಯಕ್ರಮದಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ಪೊಲೀಸ್ ಆಯುಕ್ತ ಡಾ.ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯಕ್ತರು ಪುರಭವನದಲ್ಲಿ ಬೆಳಿಗ್ಗೆ 10 ರಿಂದ 12ರವರೆಗೆ ಮಹಿಷ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಪುರಭವನದ ಒಳಗಿನ ಸಭಾಂಗಣ ಬಿಟ್ಟು ನಗರದ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ.
ಈ ಸಂದರ್ಭ ಮೆರವಣಿಗೆ ಹಾಗೂ ಬೈಕ್ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ ಪರ ಹಾಗೂ ವಿರೋಧ ಘೋಷಣೆ ಕೂಗಬಾರದು. ಅಲ್ಲದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದಿದ್ದಾರೆ.
ಭದ್ರತೆಗೆ 2 ಸಾವಿರ ಪೊಲೀಸರ (Police) ನಿಯೋಜನೆ ಮಾಡಲಾಗಿದೆ. ಮಹಿಷ ದಸರಾ ವಿಚಾರವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ಹಾಗೂ ಪೋಸ್ಟ್ ಹಾಕಿದವರು ಕಂಡ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿದ್ದಾರೆ.