LATEST NEWS
ಸುರತ್ಕಲ್ ಡ್ರೆಜ್ಜರ್ ಕಾವಲುಗಾರನ ನಿಗೂಢ ಸಾವು..! ಸಮುದ್ರದಲ್ಲಿ ಪತ್ತೆಯಾದ ಮೃತ ದೇಹ..

ಮಂಗಳೂರು : ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿನಿಲ್ಲಿಸಲಾಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ನ ಕಾವಲುಗಾರ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಗದಗ ಮೂಲದ ಶಂಕರ (40) ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕಳೆದ ಮೂರು ದಿಗಳ ಹಿಂದೆಯಷ್ಟೇ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ಘಟನೆ ನಿನ್ನೆ ಭಾನುವಾರ ಮಧ್ಮಯ ರಾತ್ರಿ ಸುಮಾರಿಗೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಮೂರು ದಿನದ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದ ಮೃತ ಶಂಕರನಿಗೆ ನಿನ್ನೆ ಸಂಜೆ 6ರಿಂದ ಸೋಮವಾರ ಬೆಳಗ್ಗೆ 8-30ರ ವರೆಗೆ ಕರ್ತವ್ಯದ ಪಾಳಿಯಾಗಿದ್ದು ಇವರನ್ನು ಬೋಟ್ ಮೂಲಕ ಡ್ರೆಜ್ಜರಿಗೆ ಬಿಡಲಾಗಿತ್ತು.
ಆದರೆ ರಾತ್ರಿ 11-30ರ ವೇಳೆಗೆ ಸಹ ಕಾವಲು ಗಾರ ಡಿದಾಗ ಶಂಕರ್ ಡ್ರೆಜ್ಜರ್‌ನಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅಗತ್ಯ ಮಾಹಿತಿ ನೀಡಲು ಸಹಕಾರ್ಮಿಕನ ಮೊಬೈಲ್ ನಲ್ಲಿ ಚಾರ್ಜ್ ಕೂಡಾ ಇರಲಿಲ್ಲ ಎಂದು ತಿಳಿದು ಬಂದಿದ್ದು. ಆನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಶಂಕರನ ಮೃತ ದೇಹ ಇಂದು ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಶಂಕರ ಈ ಮೊದಲು ಮಂಗಳೂರಿನ ಖಾಸಗಿ ಸೆಕ್ಯುರಿಟಿ ಸಂಸ್ಥೆಯಲ್ಲಿ ಕೆಲ ಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಡ್ರೆಜ್ಜರ್ ಮಾಲಿಕನ ಮೇಲೆ ಸುರತ್ಕಲ್ ಪೊಲೀಸರು ನಿರ್ಲಕ್ಷ್ಯದ ಕಾರಣದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.